ದೇಶದಲ್ಲಿ ಮೊದಲ ಬಾರಿಗೆ ತೈಲ ನಿಕ್ಷೇಪ ಪತ್ತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೃಷ್ಣ ಗೋದಾವರಿ ಬೇಸ್​ನ 30 ಕಿಲೋ ದೂರದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ. ಮೇ ಅಥವಾ ಜೂನ್​ನಲ್ಲಿ ಈ ಭಾಗದಲ್ಲಿ ತೈಲ ಮತ್ತು ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ.

ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿ.ಮೀ ದೂರದಲ್ಲಿ, ಮೊದಲ ಬಾರಿಗೆ ತೈಲವನ್ನ ಹೊರತೆಗೆಯಲಾಯಿತು.ಇದರ ಕಾಮಗಾರಿ 2016-17ರಲ್ಲಿ ಪ್ರಾರಂಭವಾಯಿತು, ಆದರೆ ಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾಯಿತು. ಅಲ್ಲಿನ 26 ಬಾವಿಗಳಲ್ಲಿ 4 ಬಾವಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಮೇ ಮತ್ತು ಜೂನ್ ವೇಳೆಗೆ, ದಿನಕ್ಕೆ 45,000 ಬ್ಯಾರೆಲ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಉತ್ಪಾದನೆಯು ನಮ್ಮ ದೇಶದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇಕಡಾ 7 ರಷ್ಟು ಮತ್ತು ನಮ್ಮ ಅನಿಲ ಉತ್ಪಾದನೆಯ ಶೇಕಡಾ 7 ರಷ್ಟನ್ನು ಹೊಂದಿರುತ್ತದೆ ಎಂದರು.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ. “ಓಎನ್‌ಜಿಸಿ ತನ್ನ ‘ಎಫ್‌ಪಿಎಸ್‌ಓಗೆ ಮೊದಲ ತೈಲ ಹರಿವನ್ನು’ ಕೃಷ್ಣ ಗೋದಾವರಿ ಡೀಪ್-ವಾಟರ್ ಬ್ಲಾಕ್ 98/2 (ಬಂಗಾಳ ಕೊಲ್ಲಿಯಲ್ಲಿ) ಜನವರಿ 7 ರಂದು ಪ್ರಾರಂಭಿಸಿತು, ಯೋಜನೆಯ ಹಂತ-2 ಮುಕ್ತಾಯದ ಹಂತದಲ್ಲಿದೆ. ಹಂತ-3, ಗರಿಷ್ಠ ತೈಲಕ್ಕೆ ಉತ್ಪಾದನೆ ಮಾಡಲಿದೆ ಮತ್ತು ಅನಿಲ ಉತ್ಪಾದನೆಯು ಈಗಾಗಲೇ ನಡೆಯುತ್ತಿದೆ ಮತ್ತು ಜೂನ್ 2024 ರಲ್ಲಿ ಮುಗಿಯುವ ಸಾಧ್ಯತೆಯಿದೆ.” ಅದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!