Monday, August 8, 2022

Latest Posts

ಇಂದು ಭಾರತದಿಂದ ಅಫ್ಘಾನಿಸ್ತಾನಕ್ಕೆ 10 ಸಾವಿರ ಟನ್‌ ಗೋಧಿ ರವಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಭಾರತದಿಂದ ಅಫ್ಘಾನಿಸ್ತಾನದ ಜನರಿಗೆ 10 ಸಾವಿರ ಟನ್‌ ಗೋಧಿ ಕಳುಹಿಸಲಾಗುತ್ತದೆ.
ಅಟ್ಟಾರಿ-ವಾಘಾ ಭೂ ಗಡಿ ಮೂಲಕ ಗೋಧಿ ರವಾನಿಸಲಾಗುತ್ತದೆ. ಭಾರತ ಅಟ್ಟಾರಿ- ವಾಘಾ ಗಡಿ ಮೂಲಕ 50 ಸಾವಿರ ಟನ್‌ ಗೋಧಿ ಕಳುಹಿಸಲು ಪ್ರಸ್ತಾಪ ಸಲ್ಲಿಸಿದ್ದು, ಈ ಬಗ್ಗೆ ಉಭಯ ರಾಷ್ಟ್ರಗಳು ನಿರಂತರ ಮಾತುಕತೆಯಲ್ಲಿ ತೊಡಗಿವೆ.
ಮೊದಲ ಹಂತದ ಗೋಧಿ ಸಾಗಣೆಯನ್ನು ಭಾರತ ಮತ್ತು ಪಾಕ್‌ ಅಧಿಕಾರಿಗಳು ಸೇರಿ ವಿಶ್ವ ಆಹಾರ ಕಾರ್ಯಕ್ರಮದ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಔಪಚಾರಿಕವಾಗಿ ಚಾಲನೆ ನೀಡಲಾಗುವುದು.
ಈ ಬಗ್ಗೆ ಮಾಹಿತಿ ನೀಡಿದ ವಿಶ್ವ ಆಹಾರ ಕಾರ್ಯಕ್ರಮದ ಭಾರತದ ನಿರ್ದೇಶಕ ಬಿಶೋ ಪರಾಜುಲಿ, ಅಫ್ಘಾನ್‌ ಜನರಿಗೆ ಅಗತ್ಯವಿರುವ ಆಹಾರ ಒದಗಿಸುತ್ತಿರುವ ಭಾರತ ಅಪಾರ ಮೆಚ್ಚುಗೆ ಪಡೆದಿದೆ. ವಿಶ್ವ ಆರೋಗ್ಯ ಕಾರ್ಯಕ್ರಮ ಈಗಾಗಲೇ 7 ಮಿಲಿಯನ್‌ ಜನರಿಗೆ ಸಹಾತ ಮಾಡಿದೆ. ಇನ್ನು 22 ಮಿಲಿಯನ್‌ ಜನರಿಗೆ ಸಹಾರದ ಅಗತ್ಯವಿದೆ ಎಂದರು.
ಅಫ್ಘಾನ್‌ ಟ್ರಕ್‌ ಮೂಲಕ ಡಬ್ಲ್ಯು ಎಫ್​​ಪಿ ಗೋದಾಮುಗಳಿಗೆ ತೆರಳುವ ಗೋಧಿಯನ್ನು ವಿಶ್ವ ಸಂಸ್ಥೆ ಅಗತ್ಯವಿರುವ ಜನರಿಗೆ ಧಾನ್ಯಗಳನ್ನು ವಿತರಿಸುವ ಕೆಲಸ ಮಾಡುತ್ತದೆ. ನಮ್ಮ ಬಳಿ 176 ಟ್ರಕ್, 600 ಜನರ ಫ್ಲೀಟ್‌ ಹೊಂದಿದ್ದೇವೆ, ಅಗತ್ಯ ಜನರಿಗಾಗಿ ನಾವು ಕೆಲಸ ಮಾಡುತ್ತೇವೆ ಎಂದು ಪರಾಜುಲಿ ತಿಳಿಸಿದರು.
ಶನಿವಾರ ಭಾರತ ಅಫ್ಘಾನ್‌ ಗೆ 2.5 ಟನ್‌ ವೈದ್ಯಕೀಯ ನೆರವನ್ನು ಹಾಗೂ ಚಳಿಗಾಲದ ಉಡುಪನ್ನು ಕಳುಹಿಸಿದೆ. ಭಾರತ ಈವರೆಗೆ 6.6 ಟನ್ ಜೀವರಕ್ಷಕ ಔಷಧಗಳನ್ನು ಮತ್ತು 500,000 ಡೋಸ್ ಕೊರೋನಾ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವ ಮೂಲಕ ಮಾನವೀಯತೆ ತೋರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss