ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷದ ಮೊದಲ ಶ್ರಾವಣ ಶನಿವಾರ ಇದಾಗಿದ್ದು, ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಮನೆಯನ್ನು ಶುಚಿಗೊಳಿಸಿ, ದೇವರುಗಳನ್ನು ಬೆಳಗಿ ತುಪ್ಪದ ದೀಪ ಹಚ್ಚಿ ಪೂಜೆ ನೆರವೇರಿಸಲಾಗುತ್ತದೆ. ಈ ದಿನ ಮಾಡುವ ಪೂಜೆಯಿಂದ ಅದೃಷ್ಟ ಒಲಿದುಬರುತ್ತದೆ ಎಂದು ಹೇಳಲಾಗಿದೆ.
ಶನಿವಾರದಂದು ವಸ್ತ್ರ, ಅನ್ನ, ನವಧಾನ್ಯಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು. ಕಪ್ಪು ವಸ್ತುಗಳ ದಾನ ಒಳ್ಳೆಯದು. ಶನಿವಾರದಂದು ಮನೆಗೆ ಕಬ್ಬಿಣ, ಉಪ್ಪು, ಹೊಸ ಪಾದರಕ್ಷೆ, ಎಣ್ಣೆ, ಕಪ್ಪು ಬಟ್ಟೆ ತರಬೇಡಿ. ಶನಿವಾರದಂದು ಗೋಮಾತೆಯನ್ನು ಪೂಜಿಸುವುದು ಉತ್ತಮ ಇದರಿಂದ ಮನೆಗೆ ಆರೋಗ್ಯ, ಆಯಸ್ಸು, ಐಶ್ವರ್ಯ ಹಾಗೂ ಅದೃಷ್ಟ ಬರುತ್ತದೆ.
ವಿಷ್ಣುವಿನ ನಕ್ಷತ್ರ ಶ್ರಾವಣ. ಆದ್ದರಿಂದಲೇ ಈ ಮಾಸದಲ್ಲಿ ವಿಷ್ಣುಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ಪುಳಿಯೋಗರೆ ಮತ್ತು ಲಡ್ಡು ಪ್ರಸಾದಗಳು ವಿಷ್ಣುವಿಗೆ ಬಹಳ ಪ್ರಿಯ. ಆದ್ದರಿಂದ ಪ್ರಸಾದಗಳನ್ನು ತಯಾರಿಸಿ ಹಂಚುತ್ತಾರೆ.