ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಟಿ 20 ಸರಣಿಯ ಮೊದಲ ಪಂದ್ಯ ಇಂದು ಆರಂಭವಾಗಲಿದೆ.
ಪಂದ್ಯಕ್ಕೆ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸಿದ್ದು, ಟೀಂ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿದೆ.
ಸಂಜೆ ಏಳು ಗಂಟೆಗೆ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ.
ಈಗಾಗಲೇ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರೋ ರೋಹಿತ್ ಪಡೆಗೆ ಈ ಪಂದ್ಯವನ್ನೂ ಗೆಲ್ಲುವ ಉತ್ಸಾಹ ಹೆಚ್ಚಾಗಿದೆ. ಏಕದಿನದಲ್ಲಿ ಸೋಲು ಕಂಡಿರೋ ಕೆರಿಬಿಯನ್ ಬಳಗ, ಟಿ-20ಪಂದ್ಯದಲ್ಲಿ ಗೆಲುವು ಕಾಣಲು ಎದುರು ನೋಡುತ್ತಿದೆ.