Sunday, October 1, 2023

Latest Posts

ಕಾಶ್ಮೀರದಲ್ಲಿ ಮೊದಲ ಬಾರಿಗೆ CoBRA ನಿಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಶ್ಮೀರ ಕಣಿವೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೊದಲ ಬ್ಯಾಚ್ ಕೋಬ್ರಾ ಕಮಾಂಡೋಗಳನ್ನು ನಿಯೋಜನೆ ಮಾಡಲು ಮುಂದಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಈಗ ನಡೆಯುತ್ತಿರುವ ಉಗ್ರರನ್ನು ಸದೆ ಬಡೆಯುವ ಕಾರ್ಯಾಚರಣೆಯು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ರೀತಿಯಲ್ಲಿದೆ. ಹಾಗಾಗಿ, ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತಜ್ಞತೆಯನ್ನು ಸಾಧಿಸಿರುವ ಕೋಬ್ರಾ ಘಟಕವನ್ನು ಬಳಸಿಕೊಳ್ಳಲಾಗುತ್ತಿದೆ

2009 ರಲ್ಲಿ, ಮಾವೋವಾದಿ ಬಂಡುಕೋರರನ್ನು ನಿಯಂತ್ರಿಸಲು ಮತ್ತು ಹೋರಾಡಲು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಅನ್ನು ರಚಿಸಲಾಗಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರಕ್ಕೆ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ ಪಡೆಗಳ ವಿಶೇಷ ಘಟಕವನ್ನು ಕಳುಹಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಭಯೋತ್ಪಾದಕರು ಕಾಡುಗಳು ಮತ್ತು ಪರ್ವತಗಳಲ್ಲಿ ಅಡಗಿಕೊಂಡು ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ವಿಧಾನಗಳ ಮೇಲೆ ಕೋಬ್ರಾ ವಿಶೇಷ ಕಣ್ಣಿಟ್ಟಿದೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯ ಅಗತ್ಯವಿದ್ದರೆ, ಅದು ಅಲ್ಲಿರುವ ಪಡೆಗಳಿಗೂ ಸಹಾಯ ಮಾಡುತ್ತದೆ.

ಅರಣ್ಯದಲ್ಲಿ ಗೆರಿಲ್ಲಾ ಮಾದರಿ ಹೋರಾಟವನ್ನು ನಡೆಸುವ ಸಾಮರ್ಥ್ಯವನ್ನು ಕೋಬ್ರಾ ಘಟಕ ಹೊಂದಿರುತ್ತದೆ. ಈ ಕೋಬ್ರಾ ಘಟಕದಲ್ಲಿರುವ ಯೋಧರಿಗೆ ಈ ಕುರಿತು ವ್ಯಾಪಕವಾದ ತರಬೇತಿಯನ್ನು ನೀಡಲಾಗಿರುತ್ತದೆ. ವಿಶೇಷವಾಗಿ ಅರಣ್ಯದಲ್ಲಿ ಅಡಗಿಕೊಂಡು ಹೋರಾಟ ಮಾಡುವುದು ಕರಗತವಾಗಿರುತ್ತದೆ.

ಕೇಂದ್ರ ಮೀಸಲು ಪೊಲೀಸ್ ಪಡೆಯು ಸುಮಾರು 3.25 ಲಕ್ಷ ಭದ್ರತಾ ಪಡೆ ಸಿಬ್ಬಂದಿಯನ್ನು ಹೊಂದಿದೆ. ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರದ ಮೂರು ಪ್ರಮುಖ ಪ್ರದೇಶಗಳು, ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳು ಮತ್ತು ಭಾರತದ ಈಶಾನ್ಯದಲ್ಲಿ ದಂಗೆ-ಪೀಡಿತ ಪ್ರದೇಶಗಳಲ್ಲಿ ಗರಿಷ್ಠ ನಿಯೋಜನೆಯೊಂದಿಗೆ ಪ್ರಮುಖ ಆಂತರಿಕ ಭದ್ರತಾ ಯುದ್ಧ ಘಟಕವಾಗಿ ಹೊರಹೊಮ್ಮಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೋಳೆ ಅರಣ್ಯದಲ್ಲಿಅಡಗಿ ಕುಳಿತಿರುವ ಉಗ್ರರನ್ನು ವಿರುದ್ಧ ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲೇ ಸಿಆರ್‌ಪಿಎಫ್‌ನ ಕೋಬ್ರಾ ನಿಯೋಜನೆಯ ಬೆಳವಣಿಗೆಯ ಭಾರೀ ಕುತೂಹಲವನ್ನು ಕೆರಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!