October 28, 2026
Wednesday, October 28, 2026
spot_img

ಆಪರೇಷನ್ ಸಿಂಧೂರ ಬಳಿಕ ಮೊದಲ ಬಾರಿ: ಎಸ್‌ಸಿಒ ಸಭೆಗೆ ಪಾಕಿಸ್ತಾನಕ್ಕೆ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಪರೇಷನ್‌ ಸಿಂಧೂರದ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ನಡೆಯಲಿರುವ ಎಸ್‌ಒಸಿ ಸಭೆಗೆ ಪಾಕಿಸ್ತಾನಕ್ಕೆ ಭಾರತ ಆಹ್ವಾನ ನೀಡಿದೆ.

ನವೆಂಬರ್‌ 20ರಿಂದ 22ರ ವರೆಗೆ ನಾಗರಿಕತೆಗಳ ಸಂವಾದ ವೇದಿಕೆಗೆ ಎಸ್‌ಸಿಒನ ಎಲ್ಲ 10 ಸದಸ್ಯ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಝೇಬ್‌ ಖಾನ್‌ ಖಿಚ್ಚಿ ಅವರಿಗೆ ಭಾರತ ಆಹ್ವಾನ ನೀಡಿದೆ.

ಸಂಸ್ಕೃತಿ, ಪರಂಪರೆ ಮತ್ತು ಜನರ ನಡುವಿನ ಬಾಂಧವ್ಯ ಬಲಪಡಿಸುವ ಉದ್ದೇಶದಿಂದ ಈ ಸಭೆ ನಡೆಸಲಾಗುತ್ತಿದೆ. ಉದ್ವಿಗ್ನತೆಯ ನಡುವೆ ಪಾಕಿಸ್ತಾನ ಭಾರತದ ಆಹ್ವಾನ ಸ್ವೀಕರಿಸಿ ಸಭೆಯಲ್ಲಿ ಭಾಗವಹಿಸುತ್ತದೋ ಇಲ್ಲವೋ ಕಾದುನೋಡಬೇಕಿದೆ.

Must Read