ಬೈಕ್‌ಗೆ ಮೀನಿನ ಲಾರಿ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲದ ಕುಂಪಲ ಬೈಪಾಸ್ ನಲ್ಲಿ ಮೀನಿನ ಲಾರಿ ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾಸರಗೋಡು ನೀರ್ಚಾಲ್ ಮಾನ್ಯ ನಿವಾಸಿ ನಿತಿನ್ ಎಂ. ಡಿ.ಮೃತ ದುರ್ದೈವಿ.
ಮಂಗಳೂರು ಕಡೆಯಿಂದ ಕುಂಬಳೆ ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ, ಕುಂಪಲ ಬೈಪಾಸ್ ರಾ.ಹೆ.ಯಲ್ಲಿ ಇಡಲಾದ ಬ್ಯಾರಿಕೇಡ್ ತಪ್ಪಿಸುವ ವೇಳೆ ಹಿಂಬದಿಯಿಂದ ಮಲ್ಪೆಯಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಮೀನಿನ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.
ಕಾಸರಗೋಡಿನಲ್ಲಿ ಸೋಲಾರ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ನಿತಿನ್ ತನ್ನ ಸ್ನೇಹಿತನ ಬೈಕ್ ನಲ್ಲಿ ಮಂಗಳೂರಿಗೆ ಆಗಮಿಸಿದ್ದು, ವಾಪಾಸ್ ಕಾಸರಗೋಡು ಕಡೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ.
ಘಟನೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!