ಮೊಜಾಂಬಿಕ್ ಕರಾವಳಿಯಲ್ಲಿ ಮೀನುಗಾರಿಕಾ ದೋಣಿ ಮುಳುಗಡೆ: 90 ಮಂದಿ ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ದ್ವೀಪ ರಾಷ್ಟ್ರದ ಕರಾವಳಿಯಲ್ಲಿ ಸಂಭವಿಸಿದ ದುರಂತದಲ್ಲಿ 130 ಜನರಿದ್ದ ಮೀನುಗಾರಿಕಾ ದೋಣಿ ಮುಳುಗಿದ್ದು, 90 ಜನರು ನೀರಿನಲ್ಲಿ ಸಮಾಧಿಯಾಗಿದ್ದಾರೆ. ಮೊಜಾಂಬಿಕ್ ನಿಂದ ನಾಂಪುಲಾ ಪ್ರವಾಸದ ವೇಳೆ ಈ ಘಟನೆ ನಡೆದಿದ್ದು. ಹಡಗಿನಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ದೋಣಿಗಳು ಪ್ರಯಾಣಿಕರನ್ನು ಸಾಗಿಸಲು ಯೋಗ್ಯವಾಗಿರಲಿಲ್ಲ ಮತ್ತು ಸತ್ತವರಲ್ಲಿ ಅನೇಕ ಮಕ್ಕಳು ಸೇರಿದ್ದಾರೆ. ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮುದ್ರದ ಪರಿಸ್ಥಿತಿಗಳು ಈ ಕಾರ್ಯಕ್ಕೆ ತೊಂದರೆಯನ್ನುಂಟುಮಾಡುತ್ತಿದೆ.

ಮೊಜಾಂಬಿಕ್ ​ನಲ್ಲಿ ಕಾಲರಾ ಪ್ರಕರಣಗಳು ಹೆಚ್ಚಿದೆ. ಅಕ್ಟೋಬರ್ 2023 ರಿಂದ ಸುಮಾರು 15,000 ಪ್ರಕರಣಗಳನ್ನು ವರದಿಯಾಗಿದೆ, ಈವರೆಗೂ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದರಿಂದಾಗಿ ಜನರು ಮೊಜಾಂಬಿಕ್ ​ನಿಂದ ವಲಸೆ ಹೋಗುತ್ತಿದ್ದಾರೆ, ನೆರೆಯ ಕಾಬೋ ಡೆಲ್ಗಾಡೊದಲ್ಲಿ ಜಿಹಾದಿ ದಾಳಿಯಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!