ರುಚಿ ಮತ್ತು ಶಕ್ತಿಯ ಸೂಪರ್ ಕಾಂಬಿನೇಷನ್, ನಿಮಿಷಗಳಲ್ಲಿ ಸಿದ್ಧವಾಗುತ್ತೆ ಮಿಲ್ಲೆಟ್ ಪೊಂಗಲ್ ರೆಸಿಪಿ
ಏನೇನ್ ಬೇಕು
ಸಿರಿಧಾನ್ಯ (ಕೊರಲೆ, ನವಣೆ)
ಹೆಸರುಬೇಳೆ
ಹಸಿಮೆಣಸಿನಕಾಯಿ
ಜೀರಿಗೆ, ಕಾಳುಮೆಣಸು
ಶುಂಠಿ
ತುಪ್ಪ
ಗೋಡಂಬಿ, ಕರಿಬೇವು, ಉಪ್ಪು
ಮಾಡೋದು ಹೇಗೆ ನೋಡೋಣ ಬನ್ನಿ
ಮೊದಲು ಸಿರಿಧಾನ್ಯ ಮತ್ತು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಒಂದು ಕುಕ್ಕರ್‌ನಲ್ಲಿ ಸ್ವಲ್ಪ ತುಪ್ಪ ಹಾಕಿ, ತೊಳೆದ ಹೆಸರುಬೇಳೆಯನ್ನು ತಿಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ಸಿರಿಧಾನ್ಯ, ನಾಲ್ಕು ಕಪ್ ನೀರು ಮತ್ತು ಉಪ್ಪು ಸೇರಿಸಿ 3 ರಿಂದ 4 ವಿಸಿಲ್ ಕೂಗಿಸಿ. ಧಾನ್ಯಗಳು ಚೆನ್ನಾಗಿ ಬೆಂದ ನಂತರ ಒಲೆಯಿಂದ ಇಳಿಸಿ.
ಇನ್ನೊಂದು ಬಾಣಲೆಯಲ್ಲಿ ಉಳಿದ ತುಪ್ಪ ಬಿಸಿ ಮಾಡಿ. ಅದಕ್ಕೆ ಜೀರಿಗೆ, ಕಾಳುಮೆಣಸು, ಶುಂಠಿ ತುರಿ, ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಗೋಡಂಬಿ ಹಾಕಿ ಹೊಂಬಣ್ಣ ಬರುವವರೆಗೆ ಒಗ್ಗರಣೆ ಮಾಡಿ. ಈ ಒಗ್ಗರಣೆಯನ್ನು ಬೆಂದ ಸಿರಿಧಾನ್ಯ ಮತ್ತು ಬೇಳೆಯ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿದರೆ, ಬಿಸಿಬಿಸಿಯಾದ ಪೌಷ್ಠಿಕ ಮಿಲ್ಲೆಟ್ ಪೊಂಗಲ್ ಸವಿಯಲು ಸಿದ್ಧ!
ಇದನ್ನ ತಿನ್ನೋದ್ರಿಂದ ಹೆಲ್ತ್ ಗೆ ಏನ್ ಲಾಭ?
ಈ ಸಿರಿಧಾನ್ಯ ಪೊಂಗಲ್‌ನಲ್ಲಿ ನಾರಿನಂಶ ಹೆಚ್ಚಾಗಿದ್ದು, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಮಧುಮೇಹ ಇರುವವರಿಗೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್ ಉಪಹಾರ.
ನವಣೆ, ಕೊರಲೆ ಧಾನ್ಯ ಬಳಸಿ ಮಾಡುವ ಈ ಪೊಂಗಲ್ ದೇಹಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ.


