October 11, 2026
Sunday, October 11, 2026
spot_img

ಫಿಟ್ & ಫುಡ್ 11 | ಬೇಸಿಗೆಗೆ ಹೇಳಿ ಮಾಡಿಸಿದ ಸಿಂಪಿಲ್ & ಹೆಲ್ತಿ ಮಿಲ್ಲೆಟ್ ಮೊಸರನ್ನ ರೆಸಿಪಿ.. ನೀವು ಟ್ರೈ ಮಾಡಿ

ಏನೇನ್ ಬೇಕು

ನವಣೆ

ಮೊಸರು

ಹಾಲು

ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ

ಹಸಿಮೆಣಸಿನಕಾಯಿ, ಶುಂಠಿ

ಕರಿಬೇವು, ಕೊತ್ತಂಬರಿ ಸೊಪ್ಪು, ಇಂಗು, ದಾಳಿಂಬೆ, ಉಪ್ಪು

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲಿಗೆ ನವಣೆಯನ್ನು ಚೆನ್ನಾಗಿ ತೊಳೆದು, 3 ಕಪ್ ನೀರು ಹಾಕಿ ಕುಕ್ಕರ್‌ನಲ್ಲಿ 3-4 ವಿಸಿಲ್ ಕೂಗಿಸಿ ಮೆತ್ತಗೆ ಬೇಯಿಸಿಕೊಳ್ಳಿ. ಬೆಂದ ಸಿರಿಧಾನ್ಯವನ್ನು ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಉಪ್ಪು, ಮೊಸರು ಮತ್ತು ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಕಾಯಿಸಿ ಸಾಸಿವೆ, ಜೀರಿಗೆ, ಬೇಳೆಗಳು, ಇಂಗು, ಹಸಿಮೆಣಸು, ಶುಂಠಿ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಯನ್ನು ಮೊಸರನ್ನಕ್ಕೆ ಸೇರಿಸಿ, ಮೇಲೆ ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆ ಕಾಳುಗಳಿಂದ ಅಲಂಕರಿಸಿದರೆ ಪೌಷ್ಟಿಕಯುಕ್ತ ‘ಮಿಲೆಟ್ ಕರ್ಡ್ ರೈಸ್’ ಸಿದ್ಧ!

ಇದ್ರಿಂದ ಹೆಲ್ತ್ ಗೆ ಏನ್ ಲಾಭ?

ಸಿರಿಧಾನ್ಯಗಳಲ್ಲಿ ನಾರಿನಂಶ ಹೇರಳವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್ ಡಯಟ್.

ಮೊಸರಿನಲ್ಲಿರುವ ಪ್ರೋಬಯೋಟಿಕ್ಸ್ ಜೀರ್ಣಶಕ್ತಿಯನ್ನು ಹೆಚ್ಚಿಸಿ ಹೊಟ್ಟೆಯುರಿತವನ್ನು ಶಮನಗೊಳಿಸುತ್ತದೆ.

ದಿನವಿಡೀ ಚುರುಕಾಗಿರಲು ಇದು ಅತ್ಯುತ್ತಮ ಶಕ್ತಿವರ್ಧಕ.

Must Read