October 24, 2026
Saturday, October 24, 2026
spot_img

ಫಿಟ್ & ಫುಡ್ 24 | ತಿನ್ನಲು ಸಾಫ್ಟ್, ಆರೋಗ್ಯಕ್ಕೆ ಬೆಸ್ಟ್.. ಬೆಳಗಿನ ಉಪಾಹಾರಕ್ಕೆ ಮಾಡಿ ‘ರವಾ ಚನ್ನ ಇಡ್ಲಿ’

ಏನೇನು ಬೇಕು?

ರವೆ

ಬೇಯಿಸಿದ ಕಡಲೆಕಾಳು

ಮೊಸರು

ಸಾಸಿವೆ, ಉದ್ದಿನಬೇಳೆ, ಕರಿಬೇವು, ಹಸಿಮೆಣಸಿನಕಾಯಿ, ತುರಿದ ಕ್ಯಾರೆಟ್

ಉಪ್ಪು, ಅಡುಗೆ ಸೋಡಾ

ಮಾಡೋದು ಹೇಗೆ ನೋಡಿಕೊಳ್ಳಿ

ಮೊದಲು ಒಂದು ಪಾತ್ರೆಯಲ್ಲಿ ರವೆ, ಮೊಸರು, ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಗಂಟಿಲ್ಲದಂತೆ ಕಲಸಿ 10 ನಿಮಿಷ ನೆನೆಯಲು ಬಿಡಿ. ಬೇಯಿಸಿದ ಕಡಲೆಕಾಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಮತ್ತು ನೆನೆಸಿದ ರವಾ ಮಿಶ್ರಣಕ್ಕೆ ಸೇರಿಸಿ. ಬಾಣಲೆಯಲ್ಲಿ ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ ಹಾಗೂ ಕ್ಯಾರೆಟ್ ಒಗ್ಗರಣೆ ಮಾಡಿ, ಅದನ್ನು ಇಡ್ಲಿ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇಡ್ಲಿ ಪಾತ್ರೆಗೆ ಹಿಟ್ಟು ಹಾಕುವ ಮುನ್ನ ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ. ಇಡ್ಲಿ ತಟ್ಟೆಗೆ ಎಣ್ಣೆ ಸವರಿ, ಹಿಟ್ಟು ಹಾಕಿ 10-12 ನಿಮಿಷ ಹಾವಿಯಲ್ಲಿ ಬೇಯಿಸಿದರೆ ಮೆತ್ತಗಿನ, ಇಡ್ಲಿ ಸಿದ್ಧ!

ಇದನ್ನ ತಿಂದ್ರೆ ಏನ್ ಲಾಭ?

ಕಡಲೆಕಾಳಿನಲ್ಲಿ ಪ್ರೋಟೀನ್ ಮತ್ತು ನಾರಿನಂಶ ಹೇರಳವಾಗಿದೆ.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇದು ಸೂಕ್ತವಾದ ಉಪಾಹಾರ.

Must Read

Skip to toolbar