ಏನೇನ್ ಬೇಕು?
ಪಾಲಕ್ ಸೊಪ್ಪು
ಗೋಧಿ ಹಿಟ್ಟು
ಹಸಿಮೆಣಸಿನಕಾಯಿ, ಬೆಳ್ಳುಳ್ಳಿ
ಜೀರಿಗೆ
ಎಣ್ಣೆ
ಉಪ್ಪು
ಮಾಡೋದು ಹೇಗೆ ನೋಡಿಕೊಳ್ಳಿ
ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ತೊಳೆದ ಪಾಲಕ್ ಸೊಪ್ಪನ್ನು ಅದರಲ್ಲಿ ಹಾಕಿ 2 ನಿಮಿಷ ಬೇಯಿಸಿ ತೆಗೆಯಿರಿ. ನಂತರ ಇದನ್ನು ತಣ್ಣಗಾಗಿಸಿ, ಹಸಿಮೆಣಸು ಮತ್ತು ಬೆಳ್ಳುಳ್ಳಿಯೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟು, ರುಬ್ಬಿದ ಪಾಲಕ್ ಪ್ಯೂರಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. 10 ನಿಮಿಷ ಹಾಗೇ ಬಿಡಿ. ನಾದಿದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಒಣ ಹಿಟ್ಟು ಬಳಸಿ ತೆಳುವಾಗಿ ಲಟ್ಟಿಸಿಕೊಳ್ಳಿ. ಕಾದ ಹೆಂಚಿನ ಮೇಲೆ ಲಟ್ಟಿಸಿದ ಚಪಾತಿ ಹಾಕಿ. ಎರಡೂ ಕಡೆ ಸ್ವಲ್ಪ ಎಣ್ಣೆ ಸವರಿ, ಗೋಲ್ಡನ್ ಬ್ರೌನ್ ಬರುವವರೆಗೆ ಚೆನ್ನಾಗಿ ಬೇಯಿಸಿ ತೆಗೆದರೆ ಮೃದುವಾದ ಪಾಲಕ್ ಚಪಾತಿ ಸವಿಯಲು ಸಿದ್ಧ!
ಇದನ್ನ ತಿಂದ್ರೆ ಏನ್ ಲಾಭ?
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಕೆ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ.
ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ನೆರವಾಗುತ್ತದೆ.
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಅತ್ಯುತ್ತಮ ಮತ್ತು ಹೊಟ್ಟೆಯನ್ನು ತುಂಬಿಡುವ ಆಹಾರವಾಗಿದೆ.
ನಿತ್ಯದ ಆಹಾರದಲ್ಲಿ ಪಾಲಕ್ ಅನ್ನು ಸೇರಿಸಿಕೊಳ್ಳುವುದರಿಂದ ಕಣ್ಣಿನ ದೃಷ್ಟಿ ಚುರುಕಾಗುತ್ತದೆ



