October 29, 2026
Thursday, October 29, 2026
spot_img

ಫಿಟ್ & ಫುಡ್ 29 | ಬ್ರೇಕ್‌ಫಾಸ್ಟ್ ಗೆ ಬೆಸ್ಟ್ ಚಾಯ್ಸ್.. ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನಿಸುವ ‘ವೆಜಿಟೇಬಲ್ ಪೊಂಗಲ್’

ಏನೇನ್ ಬೇಕು?

ಅಕ್ಕಿ

ಹೆಸರುಬಾಳು ಬೇಳೆ

ಕ್ಯಾರೆಟ್, ಬೀನ್ಸ್, ಬಟಾಣಿ

ತುಪ್ಪ

ಎಣ್ಣೆ

ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್

ಕಾಳುಮೆಣಸು, ಜೀರಿಗೆ

ಗೋಡಂಬಿ

ಕರಿಬೇವು

ಉಪ್ಪು

ಮಾಡೋದು ಹೇಗೆ ನೋಡಿಕೊಳ್ಳಿ

ಕುಕ್ಕರ್‌ನಲ್ಲಿ 1 ಚಮಚ ತುಪ್ಪ ಹಾಕಿ, ಅಕ್ಕಿ ಮತ್ತು ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ನಂತರ 4 ರಿಂದ 5 ಕಪ್ ನೀರು, ಹೆಚ್ಚಿದ ತರಕಾರಿಗಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 4-5 ವಿಸಿಲ್ ಬರುವವರೆಗೆ ಚೆನ್ನಾಗಿ ಬೇಯಿಸಿ. ಒಂದು ಸಣ್ಣ ಬಾಣಲೆಯಲ್ಲಿ ಉಳಿದ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ಗೋಡಂಬಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿದು ತೆಗೆಯಿರಿ. ಅದೇ ಎಣ್ಣೆಗೆ ಕರಿಬೇವು, ಜೀರಿಗೆ-ಕಾಳುಮೆಣಸಿನ ಪುಡಿ ಮತ್ತು ಶುಂಠಿ-ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಪರಿಮಳ ಬರುವವರೆಗೆ ಬಾಡಿಸಿ. ಈ ಒಗ್ಗರಣೆಯನ್ನು ಬೆಂದ ಪೊಂಗಲ್‌ಗೆ ಸೇರಿಸಿ ಚೆನ್ನಾಗಿ ಸ್ಮಾಶ್ ಮಾಡಿ ಮಿಕ್ಸ್ ಮಾಡಿ. ಬೇಕಿದ್ದರೆ ಮೇಲೆ ಮತ್ತೊಂದು ಚಮಚ ತುಪ್ಪ ಹಾಗೂ ಹುರಿದ ಗೋಡಂಬಿ ಹಾಕಿ ಬಿಸಿಯಾಗಿ ತೆಂಗಿನಕಾಯಿ ಚಟ್ನಿ ಜೊತೆ ಸವಿಯಲು ಕೊಡಿ. ಬಾಯಲ್ಲಿ ಇಟ್ಟರೆ ಕರಗುವಂತಹ ಸೂಪರ್ ಪೊಂಗಲ್ ರೆಡಿ!

ಇದನ್ನ ತಿಂದ್ರೆ ಏನ್ ಲಾಭ?

ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೊಟೀನ್ ಸಮೃದ್ಧವಾಗಿದೆ.

ಹೆಸರುಬೇಳೆ ದೇಹಕ್ಕೆ ತಂಪು ನೀಡಿದರೆ, ತರಕಾರಿಗಳು ಅಗತ್ಯ ವಿಟಮಿನ್‌ಗಳನ್ನು ಒದಗಿಸುತ್ತವೆ.

ಜೀರ್ಣಕ್ರಿಯೆಗೂ ಇದು ಅತ್ಯಂತ ಉತ್ತಮವಾದ ಆಹಾರ.

Must Read

Skip to toolbar