Monday, March 27, 2023

Latest Posts

ಫಿಟ್ ಇಂಡಿಯಾ ಕ್ವಿಜ್‌ನ ಪ್ರಾಥಮಿಕ ಸುತ್ತಿಗೆ ಆಯ್ಕೆಯಾಗಿದ್ದಾರೆ ಕರ್ನಾಟಕದ ವಿದ್ಯಾರ್ಥಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಭಾರತದ ಅತಿದೊಡ್ಡ ಹಾಗೂ ಚೊಚ್ಚಲ ‘ಫಿಟ್ ಇಂಡಿಯಾ ರಸಪ್ರಶ್ನೆ’ಯ (ಫಿಟ್ ಇಂಡಿಯಾ ಕ್ವಿಜ್) ಪ್ರಾಥಮಿಕ ಸುತ್ತಿನ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಬಾಲ್ಡ್‌ವಿನ್ ಬಾಲಕಿಯರ ಪ್ರೌಢಶಾಲೆಯ ಅರ್ಕಾಮಿತಾ ಪ್ರಾಥಮಿಕ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದರೆ, ಕೊಡಗಿನ ಕೇಂದ್ರೀಯ ವಿದ್ಯಾಲಯದ ಟಿ.ಎಸ್. ಜಿಷ್ಣು ಎರಡನೇ ಸ್ಥಾನ ಪಡೆದಿದ್ದಾರೆ.

ಪ್ರಾಥಮಿಕ ಸುತ್ತಿನಲ್ಲಿ ಅರ್ಹತೆ ಪಡೆದ ರಾಜ್ಯದ ಇತರ ಶಾಲೆಗಳು:

ಮೈಸೂರು – ಕೇಂದ್ರೀಯ ಯ ವಿದ್ಯಾಲಯ, ಬಿ.ಆರ್.ಬಿ.ಎನ್.ಎಂ.ಪಿ.ಎಲ್.
ಬೆಂಗಳೂರು ನಗರ – ಶ್ರೀರವಿಶಂಕರ್ ವಿದ್ಯಾ ಮಂದಿರ
ಬೆಂಗಳೂರು ನಗರ – ವಿಶ್ವ ವಿದ್ಯಾಪೀಠ
ಕಲಬುರಗಿ – ಡಿಎವಿ ಪಬ್ಲಿಕ್ ಸ್ಕೂಲ್, ಎಸಿಸಿ ಕಾಲೋನಿ, ವಾಡಿ
ಬೆಳಗಾವಿ – ಕೇಂದ್ರೀಯ ವಿದ್ಯಾಲಯ, ಎಎಎಸ್, ಸಾಂಬ್ರಾ
ಬೆಂಗಳೂರು ನಗರ – ಕೇಂದ್ರೀಯ ವಿದ್ಯಾಲಯ ಸಂಖ್ಯೆ- II
ಬೆಂಗಳೂರು ನಗರ – ಕಾರ್ಮೆಲ್ ಹೈಸ್ಕೂಲ್
ಚಿಕ್ಕಬಳ್ಳಾಪುರ – ಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆ
ಬೆಳಗಾವಿ – ಡಿವೈನ್ ಪ್ರಾವಿಡೆನ್ಸ್ ಕಾನ್ವೆಂಟ್ ಹೈಸ್ಕೂಲ್
ದಕ್ಷಿಣ ಕನ್ನಡ – ಕೆನರಾ ಹೈಸ್ಕೂಲ್, ಉರ್ವಾ
ಗದಗ – ಆದರ್ಶ ವಿದ್ಯಾಲಯ, ರಾಟಿ ಕೊರ್ಲಹಳ್ಳಿ
ಬಾಗಲಕೋಟೆ – ಜಿಂದಾಲ್ ಪಬ್ಲಿಕ್ ಸ್ಕೂಲ್, ಜಿಂದಾಲ್ ನಗರ, ತುಮಕೂರು ರಸ್ತೆ ಬೆಂಗಳೂರು
ಚಿಕ್ಕಮಗಳೂರು – ಹೈವೇ ಇಂಗ್ಲಿಷ್ ಶಾಲೆ, ಕಡೂರು

ಯುಪಿ ವಿದ್ಯಾರ್ಥಿಗಳು ರಾಷ್ಟ್ರೀಯ ಟಾಪರ್:
ಉತ್ತರ ಪ್ರದೇಶದ ವಿದ್ಯಾರ್ಥಿಗಳು ಪ್ರಾಥಮಿಕ ಸುತ್ತಿನ ರಾಷ್ಟ್ರೀಯ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಗ್ರೇಟರ್ ನೋಯ್ಡಾದ ದಿಲ್ಲಿ ಪಬ್ಲಿಕ್ ಸ್ಕೂಲ್‌ನ ದಿವ್ಯಾಂಶು ಚಮೋಲಿ ಅಗ್ರ ಸ್ಥಾನ ಪಡೆದರೆ, ವಾರಾಣಸಿಯ ಲಹರ್ತಾರಾದ ಸನ್ ಬೀಮ್ ಶಾಲೆಯ ಶಾಶ್ವತ್ ಮಿಶ್ರಾ ನಂತರದ ಸ್ಥಾನ ಪಡೆದಿದ್ದಾರೆ.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿದ್ದ ಫಿಟ್ ಇಂಡಿಯಾ ಕ್ವಿಜ್‌ನ ಪ್ರಾಥಮಿಕ ಸುತ್ತಿನಲ್ಲಿ ದೇಶಾದ್ಯಂತ 626ಕ್ಕೂ ಹೆಚ್ಚು ಜಿಲ್ಲೆಗಳಿಂದ 13,502 ಶಾಲೆಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 361 ಶಾಲೆಗಳ ವಿದ್ಯಾರ್ಥಿಗಳನ್ನು ಈಗ ರಾಜ್ಯದ ಸುತ್ತಿಗೆ ಅಂತಿಮಗೊಳಿಸಲಾಗಿದೆ. ರಸಪ್ರಶ್ನೆಗೆ ₹ 3.25 ಕೋಟಿ ಬಹುಮಾನ ಮೊತ್ತವಿದ್ದು, ಇದನ್ನು ರಸಪ್ರಶ್ನೆಯ ವಿವಿಧ ಹಂತಗಳಲ್ಲಿ ವಿಜೇತ ಶಾಲೆಗಳು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುವುದು.

ರಸಪ್ರಶ್ನೆಯ ಪ್ರತಿ ಹಂತದಲ್ಲೂ ವಿಜೇತರು ನಗದು ಬಹುಮಾನಗಳನ್ನು (ಶಾಲೆ ಮತ್ತು ಇಬ್ಬರು ಸ್ಪರ್ಧಿಗಳು) ಪಡೆಯಲಿದ್ದಾರೆ ಮತ್ತು ಭಾರತದ ಚೊಚ್ಚಲ ಫಿಟ್ ಇಂಡಿಯಾ ರಾಜ್ಯ/ರಾಷ್ಟ್ರೀಯ ಮಟ್ಟದ ಕ್ವಿಜ್ ಚಾಂಪಿಯನ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!