ಫಿಟ್​ನೆಸ್​ ಟೆಸ್ಟ್​ ಪಾಸ್​: ಟೀಮ್ ಇಂಡಿಯಾಕ್ಕೆ ನೂತನ ನಾಯಕ ರೋಹಿತ್ ಶರ್ಮಾ ಕಮ್​ಬ್ಯಾಕ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ತಂಡದ ನೂತನ ನಾಯಕ ರೋಹಿತ್ ಶರ್ಮಾ ಫಿಟ್​ನೆಸ್​ ಟೆಸ್ಟ್​ ಪಾಸ್​ ಮಾಡಿದ್ದು, ಈ ಮೂಲಕ ಮುಂಬರುವ ವೆಸ್ಟ್​ ಇಂಡಿಸ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಭಾರತ ತಂಡಕ್ಕೆ ಮರಳಲಿದ್ದಾರೆ.
ಹ್ಯಾಮ್​ಸ್ಟ್ರಿಂಗ್ ಗಾಯದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದ ರೋಹಿತ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಬುಧವಾರ ಆಯ್ಕೆ ಸಮಿತಿಯನ್ನು ಭೇಟಿ ಮಾಡಲಿದ್ದಾರೆ.
ಈಗಾಗಲೇ ಟಿ20 , ಏಕದಿನ ತಂಡದ ನಾಯಕತ್ವ ವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ.
ಫೆಬ್ರವರಿ 6ರಿಂದ ಆರಂಭವಾಗಲಿರುವ ವೆಸ್ಟ್​ ಇಂಡೀಸ್ ವಿರುದ್ಧದ 3 ಟಿ20 ಮತ್ತು 3 ಏಕದಿನ ಪಂದ್ಯಗಳ​ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇದು ರೋಹಿತ್ ನಾಯಕನಾಗಿ ಮೊದಲ ಏಕದಿನ ಸರಣಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!