ಈಗೆಲ್ಲಾ ಜನರಲ್ಲಿ ಫಿಟ್ನೆಸ್ ಗೋಲ್ ಆರಂಭವಾಗಿದೆ. ತಾವು ಏನನ್ನು ತಿನ್ನಬೇಕು ಎನ್ನುವ ಬಗ್ಗೆ ಗಮನ ಹರಿಸುತ್ತಿದ್ದಾರೆ. ಈ ಹಿಂದೆ ಎಲ್ಲರೂ ರೆಸ್ಟೋರೆಂಟ್‌ಗಳಲ್ಲಿ ಜಂಕ್ ಹಾಗೂ ಎಣ್ಣೆ ಊಟ ತಿಂಡಿ ಇಷ್ಟಪಟ್ಟು ತಿನ್ನುತ್ತಿದ್ದ ಜನ ಈಗ ಒಳ್ಳೆ ಆಹಾರ ತಿನ್ನೋದಕ್ಕೆ ಆರಂಭಿಸಿದ್ದಾರೆ.
ಈಗೆಲ್ಲಾ ಶ್ರೀಮಂತರು ರೆಸ್ಟೋರೆಂಟ್‌ಗಳಿಗೆ ಹೋದರೂ ತರಕಾರಿ, ಡಯಟ್ ಆಹಾರ ತಿನ್ನುತ್ತಾರೆ. ಆದರೆ ಮಿಡಲ್ ಕ್ಲಾಸ್ ಜನರು ಹೆಚ್ಚೆಚ್ಚು ರಸ್ತೆಬದಿ ಆಹಾರ ಪ್ರಿಫರ್ ಮಾಡುತ್ತಾರೆ. ಅಪರೂಪಕ್ಕೆ ಪರವಾಗಿಲ್ಲ. ಆದರೆ ಪ್ರತಿದಿನ ಆಹಾರದಲ್ಲಿ ಈ ಪದಾರ್ಥಗಳನ್ನು ಬಳಸಿ..
ಪ್ರೋಟೀನ್ ತುಂಬಿರುವ ಆಹಾರ: ಪನೀರ್, ಹಾಲು, ಕ್ಯಾಲ್ಶಿಯಂ, ತೋಫು, ಬೇಳೆ ಕಾಳುಗಳು, ಮೊಳಕೆ ಕಾಳುಗಳು, ಸೋಯಾ, ಚಿಕನ್, ಫಿಶ್
ಫೈಬರ್ ಇರುವ ಆಹಾರ: ಸೌತೆಕಾಯಿ, ಪೈನಾಪಲ್, ಫ್ಲಾಕ್ಸ್ ಸೀಡ್ಸ್, ಚಿಯಾ ಸೀಡ್ಸ್
ವಿಟಮಿನ್ ಹೆಚ್ಚಿರುವ ಪದಾರ್ಥಗಳು: ಪಾಲಕ್, ಕೇಲ್, ಹಸಿರು ತರಕಾರಿಗಳು, ಬೆಲ್ ಪೆಪ್ಪರ್, ಕ್ಯಾರೆಟ್. ಟೊಮ್ಯಾಟೊ, ಝುಕಿನಿ, ಎಲೆಕೋಸು