ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್‌ಗಳು ಮಾಮೂಲಿ. ಇದನ್ನು ಯೂತ್ಸ್ ಇಷ್ಟ ಪಟ್ಟು ಫಾಲೋ ಮಾಡ್ತಾರೆ. ಯಾರಾದರೂ ಒಬ್ಬರು ಮುಂದೆ ಬಂದು ಚಾಲೆಂಜ್ ಆರಂಭಿಸ್ತಾರೆ, ನಂತರ ಎಲ್ಲರೂ ಮುಂದುವರಿಸುತ್ತಾರೆ.
ಆಂಡಿ ಫ್ರಿಸೆಲ್ಲಾ ಎನ್ನುವವರು ಫಿಟ್ನೆಸ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದ 12ನೇ ದಿನಕ್ಕೆ ಆಸ್ಪತ್ರೆ ಸೇರಿದ್ದಾರೆ. ಈ ಚಾಲೆಂಜ್‌ನಲ್ಲಿ ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಬೇಡಿ, ದಿನಕ್ಕೆ ಎರಡು ಬಾರಿ ವರ್ಕೌಟ್, ಜಂಕ್ ಫುಡ್ ತಿನ್ನುವಂತಿಲ್ಲ, ಆಲ್ಕೋಹಾಲ್ ಸೇವನೆ ಇಲ್ಲ, ಪಾಸಿಟಿವ್ ಆಗಿರಲು ದಿನಕ್ಕೆ 10 ಪುಟ ಪುಸ್ತಕ ಓದಬೇಕು. ಈ ಕಾರ್ಯಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಪೋಸ್ಟ್ ಮಾಡಬೇಕು.
ಆಂಡಿ 12 ದಿನ ಈ ಚಾಲೆಂಜ್ ಮಾಡಿದ್ದು, 12ನೇ ದಿನಕ್ಕೆ ಆಸ್ಪತ್ರೆ ಸೇರಿದ್ದಾರೆ. ಸುಸ್ತು, ಊಟ ತಿಂಡಿ ಸೇರದೆ ವಾಕರಿಕೆ, ಮೈ ಕೈಯಲ್ಲಿ ಶಕ್ತಿ ಇಲ್ಲದಂತಾಗುವುದು, ತಲೆನೋವು ಸಮಸ್ಯೆ ಎದುರಿಸಿದ್ದಾರೆ. ಆಸ್ಪತ್ರೆಗೆ ದಾಖಲಾದಾಗ ಇದು ಸೋಡಿಯಂ ಕೊರತೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ದಿನಕ್ಕೆ ಅರ್ಧ ಲೀಟರ್‌ಗಿಂತ ಹೆಚ್ಚು ನೀರು ಕುಡಿಯುವಂತಿಲ್ಲ ಎಂದು ತಿಳಿಸಿದ್ದಾರೆ.