April 19, 2026
Sunday, April 19, 2026
spot_img

Fitness ಮಂತ್ರ | ವರ್ಕ್ ಔಟ್ ಮಾಡೋವಾಗ ಆಯಾಸ ಕಡಿಮೆ ಮಾಡೋಕೆ ಇಲ್ಲಿದೆ ಉಪಾಯ

ವರ್ಕ್‌ಔಟ್ ಶುರು ಮಾಡಿದಾಗ ಮೊದಲ 10 ನಿಮಿಷದಲ್ಲೇ ಸಾಕು ಅನಿಸಿಬಿಡುತ್ತೆ. ದೇಹಕ್ಕಿಂತ ಮನಸ್ಸೇ ಬೇಗ ಆಯಾಸಗೊಳ್ಳುತ್ತದೆ. ಆದರೆ ಕೆಲವು ಸರಳ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ವರ್ಕ್‌ಔಟ್ ವೇಳೆ ಆಯಾಸ ಕಡಿಮೆ ಆಗಿ ಎನರ್ಜಿ ಹೆಚ್ಚಾಗುತ್ತದೆ.

*ಸರಿಯಾದ ವಾರ್ಮ್ ಅಪ್ ಮಾಡಲೇಬೇಕು: ವರ್ಕ್‌ಔಟ್‌ಗೆ ಮುನ್ನ 5-10 ನಿಮಿಷ ವಾರ್ಮ್ ಅಪ್ ಮಾಡಿದರೆ ದೇಹ ತಕ್ಷಣ ಆಕ್ಟಿವ್ ಆಗುತ್ತದೆ. ಇದು ಮಾಂಸಪೇಶಿಗಳಿಗೆ ರಕ್ತ ಪ್ರವಾಹ ಹೆಚ್ಚಿಸಿ ಆಯಾಸವನ್ನು ಕಡಿಮೆ ಮಾಡುತ್ತದೆ.

*ನೀರು ಕುಡಿಯುವುದನ್ನು ಮರೆಯಬೇಡಿ: ಡಿಹೈಡ್ರೇಷನ್ ಆಯಾಸದ ಮುಖ್ಯ ಕಾರಣ. ವರ್ಕ್‌ಔಟ್ ಮುನ್ನ ಮತ್ತು ಮಧ್ಯದಲ್ಲಿ ಸ್ವಲ್ಪ ಸ್ವಲ್ಪವಾಗಿ ನೀರು ಕುಡಿಯುವುದರಿಂದ ಎನರ್ಜಿ ಲೆವೆಲ್ ಕಾಪಾಡಿಕೊಳ್ಳಬಹುದು.

*ಲೈಟ್ ಫುಡ್ ತಿನ್ನಿ: ಖಾಲಿ ಹೊಟ್ಟೆಯಲ್ಲಿ ವರ್ಕ್‌ಔಟ್ ಮಾಡಿದರೆ ಬೇಗ ಆಯಾಸವಾಗುತ್ತದೆ. ಹೀಗಾಗಿ ಮೊದಲು ಬಾಳೆಹಣ್ಣು ಅಥವಾ ಲೈಟ್ ಸ್ನಾಕ್ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

*ಬ್ರೇಕ್ ತೆಗೆದುಕೊಳ್ಳಿ: ನಿರಂತರವಾಗಿ ವ್ಯಾಯಾಮ ಮಾಡುವುದಕ್ಕಿಂತ ಮಧ್ಯೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ದೇಹಕ್ಕೆ ಸಹಾಯ ಮಾಡುತ್ತದೆ. ಇದರಿಂದ ಸ್ಟಾಮಿನಾ ಹೆಚ್ಚುತ್ತದೆ.

*ಉಸಿರಾಟದ ಮೇಲೆ ಗಮನ ಕೊಡಿ: ಸರಿಯಾದ ಉಸಿರಾಟ ಕ್ರಮ ಪಾಲಿಸಿದರೆ ದೇಹಕ್ಕೆ ಹೆಚ್ಚು ಆಮ್ಲಜನಕ ಸಿಗುತ್ತದೆ. ಇದರಿಂದ ಆಯಾಸ ಕಡಿಮೆ ಆಗಿ ಹೆಚ್ಚು ಸಮಯ ವ್ಯಾಯಾಮ ಮಾಡಬಹುದು.

*ಮನಸ್ಸನ್ನು ಪ್ರೇರೇಪಿಸಿ: ಮ್ಯೂಸಿಕ್ ಕೇಳುತ್ತಾ ಅಥವಾ ಗುರಿ ಇಟ್ಟುಕೊಂಡು ವರ್ಕ್‌ಔಟ್ ಮಾಡಿದರೆ ಆಯಾಸ ಅನ್ನಿಸುವುದು ಕಡಿಮೆ. ಮನಸ್ಸು ಖುಷಿಯಾಗಿದ್ದರೆ ದೇಹವೂ ಸಹಕರಿಸುತ್ತದೆ.

ಸಣ್ಣ ಬದಲಾವಣೆಗಳು ನಿಮ್ಮ ಫಿಟ್ನೆಸ್ ಪ್ರಯಾಣವನ್ನು ಸುಲಭವಾಗಿಸುತ್ತವೆ. ಪ್ರತಿದಿನ consistency ಇರೋದಷ್ಟೇ ಮುಖ್ಯ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !