April 9, 2026
Thursday, April 9, 2026
spot_img

FITNESS MOTIVATION | ಬೆಳಗ್ಗೆ ಎದ್ದು ವರ್ಕ್ಔಟ್ ಮಾಡೋಕೆ ಮನಸ್ಸೇ ಇಲ್ವಾ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ವ್ಯಾಯಾಮ ಶುರು ಮಾಡೋದು ಸುಲಭ, ಆದರೆ ಅದನ್ನು ನಿಯಮಿತವಾಗಿ ಮುಂದುವರಿಸುವುದು ಅಷ್ಟೇ ಕಷ್ಟ. ಹಲವರು ಮೊದಲ ದಿನ ಉತ್ಸಾಹದಿಂದ ಪ್ರಾರಂಭಿಸಿ ಕೆಲ ದಿನಗಳಲ್ಲಿ ಬಿಟ್ಟು ಬಿಡುತ್ತಾರೆ. ಯಾಕೆ ಅಂತ ಕೇಳಿದ್ರೆ ಅಯ್ಯೋ ಯಾರ್ ಬೆಳಗ್ಗೆ ಏಳ್ತಾರೆ?, ಮೋಟಿವೇಷನ್ ಇಲ್ಲ ಅಂತಾರೆ. ಆದರೆ ಕೆಲವು ಸಣ್ಣ ಟ್ರಿಕ್‌ಗಳನ್ನು ಫಾಲೋ ಮಾಡಿದ್ರೆ ವರ್ಕ್ಔಟ್ ಮೇಲೆ ಆಸಕ್ತಿ ಹೆಚ್ಚಿಸಿ, ಅದನ್ನು ದಿನಚರಿಯ ಭಾಗವಾಗಿಸಿಕೊಳ್ಳಬಹುದು.

ಸಣ್ಣ ಗುರಿಗಳಿಂದ ಪ್ರಾರಂಭಿಸಿ: ಒಂದೇ ಸಲ ದೊಡ್ಡ ಗುರಿ ಇಡುವ ಬದಲು ದಿನಕ್ಕೆ 10–15 ನಿಮಿಷ ವ್ಯಾಯಾಮದಿಂದ ಆರಂಭಿಸಿ. ಹೀಗೆ ಮಾಡಿದರೆ ಒತ್ತಡ ಇಲ್ಲದೇ ನಿಧಾನವಾಗಿ ಅಭ್ಯಾಸವಾಗುತ್ತದೆ.

ಇಷ್ಟವಾದ ವ್ಯಾಯಾಮ ಆಯ್ಕೆ ಮಾಡಿ: ಜಿಮ್‌ಗೇ ಹೋಗಬೇಕು ಅನ್ನುವ ನಿಯಮವಿಲ್ಲ. ನಡೆಯುವುದು, ಯೋಗ ಅಥವಾ ಡ್ಯಾನ್ಸ್‌ ಕೂಡ ಉತ್ತಮ ವ್ಯಾಯಾಮ. ನಿಮಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಿ.

ಫಿಕ್ಸ್ ಸಮಯ ಇಡಿ: ಪ್ರತಿ ದಿನ ಒಂದೇ ಸಮಯದಲ್ಲಿ ವ್ಯಾಯಾಮ ಮಾಡಿದರೆ ಅದು ಅಭ್ಯಾಸವಾಗಿ ಹೋಗುತ್ತದೆ. ಬೆಳಗ್ಗೆ ಅಥವಾ ಸಂಜೆ—ಯಾವುದೇ ಸಮಯ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿ.

ಇದನ್ನೂ ಓದಿ:

ಸಂಗೀತದ ಜೊತೆ ವರ್ಕೌಟ್: ನಿಮಗೆ ಇಷ್ಟವಾದ ಹಾಡುಗಳನ್ನು ಕೇಳುತ್ತಾ ವ್ಯಾಯಾಮ ಮಾಡಿದರೆ ಬೋರ್ ಆಗುವುದಿಲ್ಲ. ಇದು ನಿಮ್ಮ ಮನಸ್ಸನ್ನು ಉಲ್ಲಾಸವಾಗಿಡುತ್ತದೆ.

ಸ್ನೇಹಿತರ ಜೊತೆ ಮಾಡಿ: ಒಬ್ಬರೇ ಮಾಡೋದಕ್ಕಿಂತ ಸ್ನೇಹಿತರ ಜೊತೆ ವ್ಯಾಯಾಮ ಮಾಡಿದರೆ ಮನಸ್ಸಿಗೆ ಸಂತೋಷವಾಗುತ್ತದೆ. ಇದು ನಿಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಕೂಡ ಹೆಚ್ಚಿಸುತ್ತದೆ.

ಈ ಸರಳ ಟ್ರಿಕ್‌ಗಳನ್ನು ಅನುಸರಿಸಿದರೆ ವ್ಯಾಯಾಮ ಒಂದು ಕೆಲಸವಲ್ಲ, ಜೀವನಶೈಲಿಯ ಭಾಗವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !