Monday, December 4, 2023

Latest Posts

ಎರಡು ಖಾಸಗಿ ವಿಮಾನಗಳ ನಡುವೆ ಡಿಕ್ಕಿ: ಮಗು ಸೇರಿ ಐದು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎರಡು ಖಾಸಗಿ ವಿಮಾನಗಳು ಡಿಕ್ಕಿಯಾದ ಪರಿಣಾಮ ಮಗು ಸೇರಿದಂತೆ ಐದು ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಮೆಕ್ಸಿಕನ್ ದೇಶದ ಉತ್ತರ ರಾಜ್ಯ ಡುರಾಂಗೊದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಡುರಾಂಗೊದ ಲಾ ಗ್ಯಾಲನ್ಸಿಟಾ ಪಟ್ಟಣದಲ್ಲಿ ಸೋಮವಾರದಂದು ಈ ಅಪಘಾತ ಸಂಭವಿಸಿದೆ.

ರಾಜ್ಯದ ಭದ್ರತಾ ಸಚಿವಾಲಯದ ಪ್ರಕಾರ, ಎರಡೂ ವಿಮಾನಗಳು ಸೆಸ್ನಾ ಲಘು ವಿಮಾನಗಳಾಗಿದ್ದು, ಒಂದು ವಿಮಾನ ಟೇಕ್ ಆಫ್ ಆಗುವಾಗ ಇನ್ನೊಂದು ವಿಮಾನ ಇಳಿಯುವ ವೇಳೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎರಡು ವಿಮಾನದಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಐದು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸಂಸ್ಥೆ ತಿಳಿಸಿದೆ.

ಈ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅದರ ಕುರಿತು ಅಧಿಕಾರಿಗಳು ತನಿಖೆ ಕೈಗೆತ್ತುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!