Friday, September 22, 2023

Latest Posts

ಏಕಾಏಕಿ ಉಸಿರು ನಿಲ್ಲಿಸಿದ ಕಂದಮ್ಮನನ್ನು ಕಾಪಾಡಿದ್ದು ವಿಮಾನದಲ್ಲಿದ್ದ ಐವರು ವೈದ್ಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಎರಡು ವರ್ಷದ ಕಂದಮ್ಮ ಏಕಾಏಕಿ ಉಸಿರು ನಿಲ್ಲಿಸಿದೆ. ಆದರೆ ಮಗು ಪಾಲಿಗೆ ದೇವರಾಗಿ ಬಂದ ವೈದ್ಯರು ಮಗುವಿನ ಜೀವವನ್ನು ಉಳಿಸಿದ್ದಾರೆ.

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಮಗು ಉಸಿರಾಟ ನಿಲ್ಲಿಸಿದೆ. ಮಗುವಿನ ಅದೃಷ್ಟ ಚೆನ್ನಾಗಿತ್ತು ಎನ್ನಬಹುದು, ಅದೇ ವಿಮಾನದಲ್ಲಿ ಐವರು ವೈದ್ಯರಿದ್ದು ಮಗುವಿನ ಜೀವವನ್ನು ಕಾಪಾಡಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆ ಈ ಬಗ್ಗೆ ಮಾತನಾಡಿದ್ದು, ಇಂಡಿಯನ್ ಸೊಸೈಟಿ ಫಾರ್ ವಾಸ್ಕುಲರ್ ಆಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ ವೈದ್ಯರ ತಂಡವು ಹಿಂದಿರುಗಿ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಮಗುವಿಗೆ ಸಮಸ್ಯೆಯಾಗಿದೆ.

ಮಗುವಿನ ಪ್ರಾಣ ಉಳಿಸಿ ತಕ್ಷಣವೇ ಫ್ಲೈಟ್‌ನ್ನು ನಾಗ್ಪುರಕ್ಕೆ ತಿರುಗಿಸಲಾಗಿದೆ. ಅಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದೆ. ಮಗು ಆಸ್ಪತ್ರೆಗೆ ಬಂದಾಗ ನಾಡಿ ಮಿಡಿತ ಇರಲಿಲ್ಲ, ಉಸಿರಾಟವೂ ಇರಲಿಲ್ಲ. ಮಗುವಿನ ದೇಹ ತಣ್ಣಗಾಗಿತ್ತು ಆದರೆ 45 ನಿಮಿಷದ ನಂತರ ಮಗು ಉಸಿರಾಡಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!