ಜಗತ್ತಿನ ಅತ್ಯುತ್ತಮ ಶಾಲೆಗಳ ಟಾಪ್ 10 ಪಟ್ಟಿಯಲ್ಲಿ ಭಾರತದ ಐದು ಶಾಲೆಗಳಿಗೆ ಸಿಕ್ಕಿದೆ ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಶಾಲೆಗಳ ಜಾಗತಿಕ ಮಟ್ಟದ ಟಾಪ್ 10 ಪಟ್ಟಿಯಲ್ಲಿ ಭಾರತದ ಐದು ಶಾಲೆಗಳು ಸ್ಥಾನ ಪಡೆದುಕೊಂಡಿವೆ.

ಬ್ರಿಟನ್‌ನ ಟಿ-4 ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಸಿ.ಎಂ.ರೈಸ್ ಶಾಲೆ, ದೆಹಲಿಯ ವಸಂತ್‌ಕುಂಜ್‌ನ ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್, ಮಹಾರಾಷ್ಟ್ರದ ರತ್ಲಾಂ ಜಿಲ್ಲೆಯ ವಿನೋಬಾ ಅಂಬೇಡ್ಕರ್ ನಗರದ ಜಿ.ಎಚ್.ಎಸ್.ಎಸ್, ತಮಿಳುನಾಡಿನ ಮಧುರೈನ ಕಲ್ವಿ ಇಂಟರ್‌ನ್ಯಾಷನಲ್ ಸ್ಕೂಲ್, ಮುಂಬೈ ಪಬ್ಲಿಕ್ ಸ್ಕೂಲ್ ಎಲ್.ಕೆ.ವಾಗ್ಜಿ ಇಂಟರ್‌ನ್ಯಾಷನಲ್ ಶಾಲೆಗಳು ಟಾಪ್ 10 ಪಟ್ಟಿಯಲ್ಲಿ ಗುರುತಿಸಿಕೊಂಡಿವೆ.

ಸಮುದಾಯದ ಸಹಭಾಗಿತ್ವ, ಪರಿಸರ ಕ್ರಿಯಾಯೋಜನೆ, ಸಂಶೋಧನೆ, ಪ್ರತಿಕೂಲ ಪರಿಸ್ಥಿತಿಯ ನಿವಾರಣೆ, ಆರೋಗ್ಯಯುತ ಜೀವನ ನಿರ್ವಹಣೆಗೆ ಪ್ರೋತ್ಸಾಹ’ಈ ವಿಭಾಗಗಳಲ್ಲಿ ಟಿ-4 ಸಂಸ್ಥೆ ಅತ್ಯುತ್ತಮ ಶಾಲೆಗಳನ್ನು ಆಯ್ಕೆ ಮಾಡುತ್ತಿದೆ. ಈ ಶಾಲೆಗಳು ಹೊಸ ಹೊಸ ಸಂಶೋಧನೆಯಲ್ಲಿ ದೃಢ ಹೆಜ್ಜೆ ಇಟ್ಟಿದೆ. ಜನರ ಜೀವನದಲ್ಲಿ ಬದಲಾವಣೆ ತಂದಿವೆ. ಕಲಿಕೆಗೆ ಉತ್ತಮ ವಾತಾವರಣ ರೂಪಿಸಿ ಅತ್ಯುತ್ತಮ ಸಾಧನೆ ಮಾಡಿವೆ ಎಂದು ಸಂಸ್ಥೆಯ ಸಂಸ್ಥಾಪಕ ವಿಕಾಶ್ ಪೋತಾ ತಿಳಿಸಿದ್ದಾರೆ.

ಪ್ರಶಸ್ತಿಯ ಮೊತ್ತ 50 ಸಾವಿರ ಡಾಲರ್ ಅಗಿದ್ದು, ಇದನ್ನು ಈ ಶಾಲೆಗಳು ಸಮಾನವಾಗಿ ಹಂಚಿಕೊಳ್ಳಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!