ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬಜೆಟ್‌ನಲ್ಲಿ ಸರ್ವರಿಗೂ ಸೂರು ಯೋಜನೆ ಅಡಿ ಐದು ಲಕ್ಷ ಹೊಸ ಮನೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
6,612 ಕೋಟಿ ರೂ. ವೆಚ್ಚದಲ್ಲಿ ಐದು ಲಕ್ಷ ಮನೆಗಳು ನಿರ್ಮಾಣವಾಗಲಿವೆ. ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಆದ್ಯತೆ ಸಿಗಲಿದೆ. ಇನ್ನು ಅಲೆಮಾರಿ, ಅರೆ ಅಲೆಮಾರಿ, ಮೀನುಗಾರರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಆದ್ಯತೆ ಸಿಗಲಿದೆ.