ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಳೆಯಲ್ಲಿ ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ.

ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ (20), ನಬಿಲ್ ನೂರ್ ಅಹ್ಮದ್‌(22), ವಿದ್ಯಾರ್ಥಿಗಳಾದ ಉಮರ್ ಸಿದ್ದಿಕ್(14), ಮಿಸ್ಬಾ ತಬಸುಮ್(21) ಮೃತಪಟ್ಟವರು.

ಭಾನುವಾರ ಈಜಲು ತೆರಳಿದ್ದಾಗ ಅವಘಡ ಸಂಭವಿಸಿದೆ.ಭಾನುವಾರ ರಜೆ ಇದ್ದುದರಿಂದ ಈಜಲು ಹೋಗಿದ್ದರು. ಓರ್ವನ ಮೃತ ದೇಹ ಪತ್ತೆಯಾಗಿದ್ದು, ನಾಲ್ವರ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!