ಮಧ್ಯಪ್ರದೇಶ: ನಾಳೆಯಿಂದ ನೂತನ ಸರ್ಕಾರದ ವಿಧಾನಸಭೆ ಅಧಿವೇಶನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಸದಾಗಿ ರಚನೆಯಾದ ಮಧ್ಯಪ್ರದೇಶ ಸರ್ಕಾರದ ಮೊದಲ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾಗಲಿದೆ.

16ನೇ ವಿಧಾನಸಭೆ ಅಧಿವೇಶನ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಮೊದಲನೇ ದಿನ ಹೊಸದಾಗಿ ಆಯ್ಕೆಯಾದ ಸದಸ್ಯರು ಮತ್ತು ಇತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂರನೇ ದಿನ ಸದನವು ಸ್ಪೀಕರ್‌ ಆಯ್ಕೆ ಮಾಡಲಿದೆ. ಡಿ.21ಕ್ಕೆ ಅಧಿವೇಶನ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ತಿನ ಭದ್ರತಾ ಲೋಪದ ಹಿನ್ನೆಲೆ ಇಲ್ಲಿನ ವಿಧಾನಸಭಾ ಭವನದಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಎಪಿ ಸಿಂಗ್ ಪೊಲೀಸರಿಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!