ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಬಂಧಿಸಲಾಗಿದೆ .
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಚಿಕೊಮೆಟ್ಟಾ ಗ್ರಾಮದ ಸಮೀಪವಿರುವ ಅರಣ್ಯದ ಬೆಟ್ಟದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ಸಿಆರ್‌ಪಿಎಫ್‌ನ 165ನೇ ಬೆಟಾಲಿಯನ್ ಮತ್ತು ಸ್ಥಳೀಯ ಪೊಲೀಸರು ಸೋಮವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತರಲ್ಲಿ ಜಾಗರಗುಂದ ಪ್ರದೇಶದ ನಿವಾಸಿ ಉಯಿಕಾ ಚೈತು (30) ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಮಾವೋವಾದಿಗಳ ಪ್ರದೇಶ ಸಮಿತಿ ಸದಸ್ಯನಾಗಿ ಸಕ್ರಿಯನಾಗಿದ್ದ ಮತ್ತು ಈತನ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದಿದ್ದಾರೆ. ಇತರರನ್ನು ಕುಂಜಮ್ ಸುಖಲಾಲ್ (35), ಪದಮ್ ಹಂಗಾ (35), ಪದಮ್ ಸನ್ನು (35) ಮತ್ತು ಮಹಿಳಾ ಕೇಡರ್ ಉಯಿಕಾ ಲಖೆ ಎಂದು ಪೊಲೀಸರು ಗುರುತಿಸಿದ್ದಾರೆ.
ಇವರಿಂದ ಆರು ಜಿಲೆಟಿನ್ ರಾಡ್‌ಗಳು, ಡಿಟೋನೇಟರ್‌ಗಳು, ಗನ್ ಪೌಡರ್, ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಶೆಲ್, ಕಾರ್ಡೆಕ್ಸ್ ವೈರ್, ಬ್ಯಾಟರಿಗಳು ಮತ್ತು ಸ್ಫೋಟಕಗಳಲ್ಲಿ ಬಳಸುವ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.