ಉತ್ತರ ಪ್ರದೇಶದಲ್ಲಿ ಐವರು ನಕ್ಸಲರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ಐವರು ನಕ್ಸಲರನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

ಬಲಿಯಾದ ಸಹತ್ವಾರ್‌ನ ಬಸಂತಪುರ ಗ್ರಾಮದಲ್ಲಿ ಅಡಗಿದ್ದ ನಕ್ಸಲರನ್ನು ಬಂಧಿಸಲಾಗಿದ್ದು, ನಕ್ಸಲೀಯ ಸಾಹಿತ್ಯ, ಕೈಬಹರಹದ ಸಂದೇಶಗಳು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿಷೇಧಿತ ಸಿಪಿಐ ಮಾವೋವಾದಿ ಗುಂಪಿನ ಜತೆ ಸಂಪರ್ಕ ಇಟ್ಟುಕೊಂಡಿದ್ದರು ಎನ್ನಲಾಗಿದೆ. ತಾರಾದೇವಿ ಅಲಿಯಾಸ್ ಮಂಜು ಮಹಿಳಾ ಗುಂಪಿನ ಮುಖ್ಯಸ್ಥೆಯಾಗಿದ್ದು,15 ಕ್ಕೂ ಹೆಚ್ಚು ವರ್ಷಗಳಿಂದ ನಿಷೇಧಿತ ಸಂಘಟನೆ ಜೊತೆ ನಂಟು ಹೊಂದಿದ್ದಾರೆ.

ಸತ್ಯಪ್ರಕಾಶ್ ಎಂಬಾತನನ್ನೂ ಬಂಧಿಸಿದ್ದು, ಈತ ನಕ್ಸಲೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ. ಅಷ್ಟೇ ಅಲ್ಲದೆ ಪೂರ್ವಾಂಚಲ್ ಭಾಗದಲ್ಲಿ ಗುಂಪು ಸಭೆ ಕರೆದು ನಕ್ಸಲ್ ಸಿಂಡಿಲೇಟ್ ಮುನ್ನಡೆಸುತ್ತಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!