ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬ್ರಿಕ್ಸ್ ಒಕ್ಕೂಟಕ್ಕೆ ಹೊಸದಾಗಿ ಐದು ರಾಷ್ಟ್ರಗಳನ್ನು ಸೇರಿಸಲಾಗಿದೆ.
ಈಗಾಗಲೇ ಬ್ರೆಜಿಲ್, ಭಾರತ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟದಲ್ಲಿದ್ದು, ಇದೀಗ ಹೊಸದಾಗಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳಿಗೆ ಬ್ರಿಕ್ಸ್ ಪೂರ್ಣ ಸದಸ್ಯತ್ವವನ್ನು ನೀಡಿ ಘೋಷಿಸಲಾಗಿದೆ.
ಮಾಸ್ಕೋ ಬ್ರಿಕ್ಸ್‌ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೋಮವಾರ, ‘ಈ ಗುಂಪು 10-ರಾಷ್ಟ್ರಗಳ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಹೊಸ ಸದಸ್ಯರಾಗಿ ಐದು ರಾಷ್ಟ್ರಗಳು ಸೇರ್ಪಡೆಗೊಂಡಿವೆ’ ಎಂದು ಘೋಷಿಸಿದ್ದಾರೆ.
ಆಗಸ್ಟ್‌ನಲ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರು ಅರ್ಜೆಂಟೀನಾ ಸೇರಿದಂತೆ ಆರು ದೇಶಗಳನ್ನು ಜನವರಿ 1 ರಿಂದ ಜಾರಿಗೆ ಬರುವಂತೆ ಒಕ್ಕೂಟಕ್ಕೆ ಸೇರಿಸುವ ಪ್ರಸ್ತಾಪವನ್ನು ಅನುಮೋದಿಸಿದ್ದರು.
ಆದರೆ ಅರ್ಜೆಂಟೀನಾದ ಹೊಸ ಅಧ್ಯಕ್ಷ ಜೇವಿಯರ್ ಮಿಲೀ ಅವರು ಕಳೆದ ವಾರ ತಮ್ಮ ದೇಶವನ್ನು ಬ್ರಿಕ್ಸ್ ಸದಸ್ಯತ್ವದಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಹೀಗಾಗಿ ಉಳಿದ ಐದು ದೇಶಗಳಿಗೆ ಸದಸ್ಯತ್ವ ನೀಡಲಾಗಿದೆ.