Wednesday, February 28, 2024

ಜಪಾನ್‌ ವಿಮಾನ ದುರಂತ: ಕೋಸ್ಟ್‌ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಪಾನಿನ (Japan) ಟೋಕಿಯೋದ ಹನೆಡಾ ವಿಮಾನ ನಿಲ್ದಾಣದಲ್ಲಿ (Tokyo’s Haneda Airport) ನಡೆದ ವಿಮಾನ ಡಿಕ್ಕಿಯಲ್ಲಿ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ .

ಮಂಗಳವಾರ ಜಪಾನ್ ಏರ್‌ಲೈನ್ಸ್ ಜೆಟ್ ಕೋಸ್ಟ್ ಗಾರ್ಡ್ (Coast Guard aircraft) ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ . ಪ್ರಯಾಣಿಕ ವಿಮಾನದಲ್ಲಿದ್ದ ಎಲ್ಲಾ 367 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ ಆರು ಸಿಬ್ಬಂದಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

JAL 516 ವಿಮಾನ ಹೊಕ್ಕೈಡೊದಿಂದ ಟೇಕಾಫ್‌ ಆದ ವಿಮಾವು ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್‌ ಆಗುತ್ತಿದ್ದಾಗ ಹೊತ್ತಿ ಉರಿದಿದೆ. ಸದ್ಯ ವಿಮಾನ ಡಿಕ್ಕಿಯ ಬಳಿಕ ಬೆಂಕಿ ಹೊತ್ತಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಕೋಸ್ಟ್ ಗಾರ್ಡ್ ವಿಮಾನದಲ್ಲಿ ಆರು ಸಿಬ್ಬಂದಿ ಇದ್ದರು. ಅವಘಡದಿಂದಾಗಿ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ. ವಿಮಾನದ ಕ್ಯಾಪ್ಟನ್ ಸ್ಥಿತಿ ಗಂಭೀರವಾಗಿದೆ ಎಂದು ಟೋಕಿಯೊದ ಪೊಲೀಸ್ ಇಲಾಖೆಯು ಜಪಾನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (NHK) ಗೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!