ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿಯ ಮನೆಯಿಂದ ಚಿನ್ನ ಎಗರಿಸಿದ ಐವರು ಪೊಲೀಸರು: ಬೇಲಿಯೇ ಎದ್ದು ಹೊಲ ಮೇಯೊದು ಅಂದ್ರೆ ಇದೆ
ಜನರ ಸುರಕ್ಷತೆಗೆ ನಿಂತಿರಬೇಕಾದ ಪೊಲೀಸರೇ ಕಳ್ಳತನ ಆರೋಪದಲ್ಲಿ ಸಿಲುಕಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬೆಳಕಿಗೆ ಬಂದಿದೆ.
ಉದ್ಯಮಿ ಗೌರವ್ ಜೈನ್ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಿನ್ನ ದೋಚಿದ ಆರೋಪದಲ್ಲಿ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಆಸ್ತಿ ವಿವಾದವನ್ನು ಪರಿಹರಿಸುವ ನೆಪದಲ್ಲಿ ಮನೆಗೆ ಬಂದ ಪೊಲೀಸರು, ಮೊದಲು ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ಮಾಸ್ಟರ್ ಕೀ ಬಳಸಿ ಒಳನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಮನೆಯೊಳಗೆ ಶೋಧ ನಡೆಸುವ ಹೆಸರಿನಲ್ಲಿ ಸುಮಾರು 220 ಗ್ರಾಂ ಚಿನ್ನ ಕದ್ದಿದ್ದಾರೆ ಎಂದು ಗೌರವ್ ಜೈನ್ ದೂರಿದ್ದಾರೆ. ಈ ಪ್ರಕರಣದಲ್ಲಿ ಎಸ್‌ಐ ಸಂಜಯ್ ವಿಷ್ಣೋಯ್, ರಣವೀರ್ ಕುಶ್ವಾ, ಪ್ರಣೀತ್ ಭಡೋರಿಯಾ, ದಿನೇಶ್ ಗುರ್ಜರ್ ಮತ್ತು ದೀಪೇಂದ್ರ ಮಿಶ್ರಾ ಹೆಸರುಗಳು ಹೊರಬಂದಿವೆ.
ಇದನ್ನೂ ಓದಿ:
ಇದಲ್ಲದೆ, ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿ ಗ್ವಾಲಿಯರ್‌ನ ಅತಿಥಿ ಗೃಹಕ್ಕೆ ಕರೆದೊಯ್ದು ನಿವೃತ್ತ ಎಸಿಪಿಗೆ ಸಂಬಂಧಿಸಿದವರಿಗೆ ಒಪ್ಪಿಸಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ. ಹಣದ ವಿಚಾರದಲ್ಲಿಯೂ 27,000 ರೂ. ಸುಲಿಗೆ ಮಾಡಲಾಗಿದ್ದು, ಅದರಲ್ಲೂ ಒಂದು ಭಾಗವನ್ನು ಕ್ಯೂಆರ್ ಕೋಡ್ ಮೂಲಕ ಹಾಗೂ ಇನ್ನೊಂದು ಭಾಗವನ್ನು ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಡಿಸಿಪಿ ಅಮರೇಂದ್ರ ಸಿಂಗ್ ಐವರು ಪೊಲೀಸರನ್ನು ತಕ್ಷಣ ಅಮಾನತು ಮಾಡಿ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಮುಂದಿನ ತನಿಖೆ ಮುಂದುವರಿದಿದೆ.



