May 15, 2026
Friday, May 15, 2026
spot_img

ಬಿಸಿಲಿನಿಂದ ಬೇಸತ್ತ ಜನತೆಗೆ ಮುಸಲಧಾರೆಯ ಸಿಂಚನ: ಬೀದರ್ ನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

ಹೊಸದಿಗಂತ ವರದಿ ಬೀದರ್:

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿರುವ ಬಗ್ಗೆ ವರದಿಯಾಗಿದೆ, ಇದಲ್ಲದೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ.

ಕಳೆದ ಎರಡು ದಿನಗಳಿಂದ ಬೆಳಿಗ್ಗೆಯಿಂದ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಜನ ಮಳೆಯಿಂದಾಗಿ ಕೊಂಚ ಮಟ್ಟಿಗೆ ನೆಮ್ಮದಿ ನೀಡಿದೆ, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಗುಡುಗು ಸಹಿತ ಮಳೆ ಬಿದ್ದಿದೆ. ಹುಮನಾಬಾದ್ ತಾಲೂಕಿನ ಹಿಲಾಲಪುರ್, ಹಳ್ಳಿಖೇಡ್, ಹಾಲಹಳ್ಳಿ, ಬ್ಯಾಲಹಳ್ಳಿ, ಭಾಲ್ಕಿ ಪಟ್ಟಣ ಹಾಗೂ ಬಸವಕಲ್ಯಾಣ ನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಇದನ್ನೂ ಓದಿ:

ಡಾಕುಳಗಿ ಗ್ರಾಮ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಮಧ್ಯಾಹ್ನದಿಂದಲೇ ಬಿರುಗಾಳಿ ಸಹಿತ ಮೋಡ ಕವಿದಿತ್ತು, ನಂತರ ರಭಸದಿಂದ ಆಲಿಕಲ್ಲು ಮಳೆ ಬರಲಾರಂಭಿಸಿತು. ಒಂದು ಗಂಟೆ ಕಾಲ ಸುರಿದ ಮಳೆಯಿಂದ ರಸ್ತೆ ಹಾಗೂ ಚರಂಡಿಗಳು ನೀರಿನಿಂದ ತುಂಬಿಕೊಂಡವು.

ಬಿಸಿಲಿನ ಧಗೆಯಿಂದ ಬೆಂದಿದ್ದ ಜನರಿಗೆ ತಂಪಿನ ವಾತಾವರಣ ಖುಷಿ ನೀಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !