ಹೊಸದಿಗಂತ ಡಿಜಿಟಲ್ ಡೆಸ್ಕ್:
5 ಬಾಲಿವುಡ್ ಸ್ಟಾರ್ ನಟರಿಗೆ ‘ಆರ್ಟಿಕಲ್ 370’ ನಿರ್ದೇಶಕ ಆದಿತ್ಯಾ ಧರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಕುರಿತು ಅಧಿಕೃತ ಪೋಸ್ಟರ್ ಕೂಡ ಹೊರಬಿದ್ದಿದೆ.
ಈ ಮೆಗಾ ಸಹಯೋಗದಲ್ಲಿ, ರಣವೀರ್ ಸಿಂಗ್, ಸಂಜಯ್ ದತ್ , ಆರ್. ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಇರುವುದು ವಿಶೇಷ. ಇದನ್ನು ‘ಯುಆರ್‌ಐ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧರ್ ನಿರ್ದೇಶಿಸಲಿದ್ದಾರೆ.
ರಣವೀರ್ ಸಿಂಗ್, ತಮ್ಮ ಮುಂಬರುವ ಚಲನಚಿತ್ರವನ್ನು ಘೋಷಿಸಿ, ಇದು ನನ್ನ ಅಭಿಮಾನಿಗಳಿಗಾಗಿ, ನನ್ನೊಂದಿಗೆ ತುಂಬಾ ತಾಳ್ಮೆಯಿಂದಿರುವ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ನಿಮಗೆ ಭರವಸೆ ನೀಡುತ್ತೇನೆ. ಈ ಬಾರಿ ಹಿಂದೆಂದೂ ಇಲ್ಲದಂತಹ ಸಿನಿಮೀಯ ಅನುಭವವನ್ನು ನಾನು ನಿಮಗೆ ನೀಡುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಪತಿಯ ಪೋಸ್ಟ್‌ಗೆ ದೀಪಿಕಾ ಪಡುಕೋಣೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡಕ್ಕೆ ನಟಿ ಶುಭಕೋರಿದ್ದಾರೆ.