ಹೊಸದಿಗಂತ ವರದಿ,ರಾಮನಗರ :
ಕೇಂದ್ರದ ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಕೂಗು ಮೊದಲಿನಿಂದಲೂ ಇದೆ. ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬುದು ಇಲ್ಲ. ನಾವು ತತ್ವ ಸಿದ್ದಾಂತ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಗೆಲವು ಸೋಲು ಚುನಾವಣೆಯಲ್ಲಿ ಸಾಮಾನ್ಯ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ಗೆ ಹಿನ್ನಡೆ ಹಿನ್ನೆಲೆ ದೇಶದ ಜನ ಕಾಂಗ್ರೆಸ್ ಮೇಲೆ ಇದ್ದ ವಿಶ್ವಾಸವನ್ನ ಕಡಿಮೆ ಮಾಡಿದ್ದಾರೆ.
ಕಾರಣ ಏನು ಎಂಬ ಬಗ್ಗೆ ನಮ್ಮ ನಾಯಕರು ಚರ್ಚೆ ಮಾಡುತ್ತಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಎಲ್ಲಾ ಚುನಾವಣೆಗಳು ಒಂದೇ ರೀತಿ ಆಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ರಾಮನಗರ ತಾಲೂಕಿನ ವಿಜಯಪುರ ಗ್ರಾಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆ ನೀಡಿದ್ದಾರೆ. ಪಂಜಾಬ್ನಲ್ಲಿ ಕಳೆದ ಆರು ತಿಂಗಳಿಂದ ಗೊಂದಲಗಳು ಸೃಷ್ಠಿ ಆಯ್ತು. ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು. ಹೀಗಾಗಿ ಹಿನ್ನಡೆ ಆಗಿದೆ. ಅದನ್ನು ಸರಿಮಾಡುವ ಕೆಲಸ ಆಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಚುನಾವಣೆಗೂ ಮೊದಲು ಗುಜರಾತ್ ಚುನಾವಣೆ ಇದೆ. ಯಾವುದೇ ರಾಜ್ಯದ ಚುನಾವಣೆ ವ್ಯತಿರಿಕ್ತವಾಗಿ ಇರುತ್ತೆ. ಅಲ್ಲಿನ ಪರಿಸ್ಥಿತಿ ಆಧಾರಿಸಿ ಚುನಾವಣೆ ನಡೆಯುತ್ತದೆ. ಕಾಂಗ್ರೆಸ್ ಪಕ್ಷ ಕುಗ್ಗಿದೆ ಎಂಬುದು ಸುಳ್ಳು. ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಇದೀಗ ಬಿಜೆಪಿ ಗೆಲುವು ಸಾಧಿಸಲಿರಬಹುದು. ಮುಂದಿನ 2024 ರ ಚುನಾವಣೆಯಲ್ಲಿ ಬದಲಾವಣೆ ಆಗುತ್ತದೆ. ಪಂಚರಾಜ್ಯ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ದಕ್ಷಿಣ ಭಾರತ ರಾಜ್ಯಗಳ ಚುನಾವಣಾ ರೀತಿ ನೀತಿ ಬೇರೆ ಎಂದು ಡಿ.ಕೆ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಒಂದು ಎರಡು ಸೀಟ್ ಗೆದ್ದಿತ್ತು. ಇದೀಗ ದೇಶ ಆಳುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮುಂದೆ ಯುಪಿಯಲ್ಲಿ ಬದಲಾವಣೆ ಕಾಣುತ್ತೇವೆ ಎಂದು ಹೇಳಿದ್ದಾರೆ.
ಮುಳುಗುವ ಹಡಗೋ, ಮುಳಗುತ್ತಿರೋ ಹಡಗೋ, ಎದ್ದು ಬರುವ ಸಾಮರ್ಥ್ಯ ಕಾಂಗ್ರೆಸ್ಗೆ ಇದೆ. ಮಾಧ್ಯಮಗಳು ವಸ್ತು ಸ್ಥಿತಿ ತಿಳಿಸುವ ಕೆಲಸ ಮಾಡಬೇಕು. ಬಿಜೆಪಿ ವಿರುದ್ಧ ಜನರು ಬೇಸತ್ತಿದ್ದಾರೆ. ಐಟಿ, ಸಿಬಿಐ, ಚುನಾವಣಾ ಆಯೋಗ ಇದರ ದುರ್ಬಳಕೆ ಇಂದಿನ ಫಲಿತಾಂಶಗಳು. ಆರು ತಿಂಗಳು ಇರುವಾಗಲೇ ಬೆದರಿಕೆ ಹಾಕುವ ಕೆಲಸ ನಡೆದಿದೆ. ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಇರುತ್ತೆ. ಕೇಂದ್ರದ ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಕೂಗು ಮೊದಲಿನಿಂದಲೂ ಇದೆ. ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬುದು ಇಲ್ಲ. ನಾವು ತತ್ವ ಸಿದ್ದಾಂತ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಗೆಲವು ಸೋಲು ಚುನಾವಣೆಯಲ್ಲಿ ಸಾಮಾನ್ಯ ಎಂದು ಅವರು ತಿಳಿಸಿದ್ದಾರೆ.
ಈಗಲ್ಟನ್ ರೆಸಾರ್ಟ್ ವಿಚಾರ: ಸಿಎಂ ಅವರಿಗೆ ಹೇಳಿ ಉಚಿತವಾಗಿ ಬರೆಸಿಕೊಡಲಿ ಎಂದ ಡಿಕೆ ಸುರೇಶ್
ಕುಮಾರಸ್ವಾಮಿ ಅವರಿಗೆ ಇದೀಗ ಏನು ಮಾಡಬೇಕು? ಕುಮಾರಸ್ವಾಮಿ ಅವರಿಗೆ ಏನು ತೊಂದರೆ ಆಗಿದೆ? 27 ಎಕರೆ ಸರ್ಕಾರಕ್ಕೆ ಕೊಡಬೇಕು ಎಂಬುದೇ ಸಂತೋಷದ ವಿಚಾರ. ಫ್ರೀ ಅಗಿ ಬರೆಸಿಕೊಡಲಿ. ಅವರ ಬಣ್ಣ ಏನು ಎಂಬುದು ಬಯಲಾಗಿದೆ. ಅವರು ಯಾರೊದ್ದೊ ಪರವಾಗಿ ಮಾತನಾಡಿದ್ದಾರೆ. ಕಾನೂನು ಆದೇಶದ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ಸೈಟ್ ಮಾರಾಟದ ಬೆಲೆಯ ನಿಗದಿ ಮೇಲೆ ದರ ನಿಗದಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ, ಬೇರೆ ನಾಯಕರ ಪ್ರಭಾವವಾಗಲಿ ಬರುವುದಿಲ್ಲ. ಇವರು ಪ್ರಭಾವ ಬೀರುವುದಾದರೇ ಬೀರಲಿ. ಸಿಎಂ ಅವರಿಗೆ ಹೇಳಿ ಉಚಿತವಾಗಿ ಬರೆಸಿಕೊಡಲಿ. ಬಿಜೆಪಿ ಅವರು ಕೂಡ ಫ್ರೀ ಆಗಿ ಬರೆದುಕೊಡಲಿ. ಸಂದರ್ಭ ಬಂದಾಗ ರಾಜ್ಯದ ಜನರ ಮುಂದೆ ಇಡುತ್ತೇವೆ, ಕಾದು ನೋಡಿ ಎಂದು ಹೆಚ್.ಡಿ. ಕುಮಾರಸ್ವಾಮಿಗೆ ಡಿ.ಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಈಗಲ್ಟನ್ ರೆಸಾರ್ಟ್ ವಿಚಾರವಾಗಿ ವಿಧಾನಸಭೆ ಬಜೆಟ್ ಅಧಿವೇಶನಲ್ಲಿ ಹೆಚ್.ಡಿ ಕುಮಾರಸ್ವಾಮಿ ಪ್ರಸ್ತಾಪ ವಿಚಾರಕ್ಕೆ ಡಿ.ಕೆ. ಸುರೇಶ್ ಹೇಳಿದ್ದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ರಾಜು. ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಇಕ್ಬಾಲ್ ಹುಸೇನ್. ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಮುತ್ತರಾಜು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಿ. ಹೆಚ್ ರಾಜು. ನಗರ ಘಟಕದ ಅಧ್ಯಕ್ಷ ಚೇತನ ಕುಮಾರ. ಪ್ರಭು. ಕೆಂಚೇಗೌಡ. ಪಾಪಣ್ಣ. ಜಯಮ್ಮ. ಮುಂತಾದವರು ಉಪಸ್ಥಿತರಿದ್ದರು