ಆಗಸ್ಟ್ 15 ರಿಂದ ಶಿವಮೊಗ್ಗದಿಂದ ಚೆನ್ನೈಗೆ ವಿಮಾನ: ಸಂಸದ ರಾಘವೇಂದ್ರ

ಹೊಸದಿಗಂತ ವರದಿ, ಶಿವಮೊಗ್ಗ :

ಆಗಸ್ಟ್ 15 ರಿಂದ ಸ್ಪೈಸ್ ಜೆಟ್ ಸಂಸ್ಥೆಯಿಂದ ಚೆನ್ನೈಗೆ ವಿಮಾನ ಹಾರಾಟ ಆರಂಭಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ-ಚೆನ್ನೈ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚೆನ್ನೈ ವಿಮಾನ ಹಾರಾಟದ ಜೊತೆಗೆ ವಾರದಲ್ಲಿ ಒಂದು ದಿನ ಹೈದ್ರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೂ ಸ್ಪೈಸ್ ಜೆಟ್ ಹಾರಾಟ ನಡೆಸಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಮಧ್ಯ ಕರ್ನಾಟಕದ ಪ್ರಮುಖ ನಿಲ್ದಾಣ ಆಗಿದೆ. ಇಲ್ಲಿ ರಾತ್ರಿ ವೇಳೆ ಇಳಿಯಲು ದೀಪ ಅಳವಡಿಸಲಾಗಿದೆ. ಅದಕ್ಕೆ ಡಿಜಿಸಿಎ ಅನುಮತಿ ಸಿಗಬೇಕು. ಕೆಲ ದಿನಗಳಲ್ಲಿ ಅನುಮತಿ ಸಿಗಲಿದೆ. ಮಂಗಳೂರು ಬಳಿಕ ರಾತ್ರಿ ವಿಮಾನ ಇಳಿಯುವ ವ್ಯವಸ್ಥೆ ಹೊಂದಿರುವ ವಿಮಾನ ನಿಲ್ದಾಣ ಮತ್ತು ಅತ್ಯಂತ ಸುರಕ್ಷಿತ ನಿಲ್ದಾಣ ಆಗಿ ಹೊರಹೊಮ್ಮಲಿದೆ ಎಂದರು.

ಬೀರೂರು ಮಾರ್ಗ ಡಬಲಿಂಗ್ ಆಗಬೇಕು. ಆಗ ರೈಲುಗಳು ಬೇಗ ಹೋಗಬಹುದು. ಇದಕ್ಕಾಗಿ 1200 ಕೋಟಿ ಪ್ರಸ್ತಾವನೆ ಹೋಗಿದೆ. ಅನುಮತಿ ಶೀಘ್ರವೇ ಸಿಗುವ ನಿರೀಕ್ಷೆ ಇದೆ ಎಂದರು.

ತಾಳಗುಪ್ಪದಿಂದ ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಲು ಅರಣ್ಯ ಸಮಸ್ಯೆ ಇದೆ. ಹಾಗಾಗಿ ಬೀರೂರು, ಹಾಸನ, ಮಂಗಳೂರು ಸಂಪರ್ಕ ಪ್ರಸ್ತಾವನೆ ಹೋಗಿದೆ. ಇದು ಖಂಡಿತ ಯಶಸ್ವಿ ಆಗಲಿದೆ ಎಂದರು.

ಶಾಸಕರಾದ ಶಾರದಾ ಪೂರ್ಯನಾಯ್ಕ, ಡಿ.ಎಸ್.ಅರುಣ್‌, ಡಾ.ಧನಂಜಯ ಸರ್ಜಿ, ರೈಲ್ವೆ ಅಧಿಕಾರಿ ವಿನಾಯಕ ನಾಯಕ್, ಜಡ್‌ಆರ್‌ಸಿಸಿ ಸದಸ್ಯ ಕೆ.ವಿ. ವಸಂತಕುಮಾರ್, ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಗೋಪಿನಾಥ್, ವಸಂತ ಹೋಬಳಿದಾರ್, ರೈಲ್ವೆ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!