ವಿಮಾನ- ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯ: ಹೊಸ ಕೋವಿಡ್ -19 ನಿಯಮ ಹೊರಡಿಸಿದ DGCA!

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಿಗೆ ಬುಧವಾರ ಹೊಸ ಕೋವಿಡ್ -19 ನಿಯಮಗಳನ್ನ ಹೊರಡಿಸಿದ್ದು, ಇನ್ಮುಂದೆ ಪ್ರಯಾಣದುದ್ದಕ್ಕೂ ಜನರು ಮಾಸ್ಕ್‌ ಕಡ್ಡಾಯಗೊವಾಗಿ ಹಾಕಬೇಕು. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಮಾಸ್ಕ್ ತೆಗೆಯಲು ಅವಕಾಶ ನೀಡಿದೆ.
ದೆಹಲಿ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ, ನಿಯಮ ಉಲ್ಲಂಘಿಸುವವರನ್ನು ‘ಅಶಿಸ್ತಿನ ಪ್ರಯಾಣಿಕರು’ ಎಂದು ಪರಿಗಣಿಸಬಹುದು ಎಂದು ಹೇಳಿದೆ. ಇನ್ನು ಹೊಸ ನಿಯಮಗಳನ್ನ ಉಲ್ಲಂಘಿಸುವವರನ್ನ ‘ನೋ ಫ್ಲೈ ಲಿಸ್ಟ್’ ನಲ್ಲಿ ಹಾಕಬಹುದು.
ಆದೇಶದ ಪ್ರಕಾರ, ಪ್ರಯಾಣಿಕರು ಪದೇ ಪದೇ ಮಾಸ್ಕ್ ಧರಿಸಲು ನಿರಾಕರಿಸಿದರೆ ಮತ್ತು ಕೋವಿಡ್ ಪ್ರೋಟೋಕಾಲ್‌ಗಳನ್ನ ಅನುಸರಿಸದಿದ್ದರೆ, ಅವರನ್ನ ‘ಅಶಿಸ್ತಿನ’ ಎಂದು ಪರಿಗಣಿಸಲಾಗುತ್ತದೆ ಅಥವಾ ಡಿಬೋರ್ಡ್ ಮಾಡಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ, ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಮತ್ತು ಭದ್ರತಾ ಏಜೆನ್ಸಿಗಳಿಗೆ ಹಸ್ತಾಂತರಿಸಬೇಕು ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!