ಅಗ್ನಿಪಥ ವಿರೋಧಿಗಳಿಗೆ ಮುಖಭಂಗವಾಗುವಂತೆ ಹರಿದು ಬಂತು ಅರ್ಜಿಗಳ ಪ್ರವಾಹ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದ ಅಗ್ನಿಪಥ ಯೋಜನೆಗೆ ಅರ್ಜಿ ಆಹ್ವಾನಿಸಿದ ಮೂರೇ ದಿನದಲ್ಲಿ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಭಾನುವಾರ ವಾಯುಪಡೆ ತಿಳಿಸಿದೆ.
ವಾಯುಪಡೆಯಲ್ಲಿ ಯುವಕರಿಂದ ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಕೆಯಾಗುತ್ತಿದ್ದು, 3000 ಸ್ಲಾಟ್​ಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಮೂರೇ ದಿನದಲ್ಲಿ ಬರೋಬ್ಬರಿ 56, 960 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 5ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆದರೆ ಪ್ರಸಕ್ತ ವರ್ಷದಲ್ಲಿ 3000 ಅಗ್ನಿವೀರರ ಆಯ್ಕೆಗೆ ಮಾತ್ರ ಅವಕಾಶವಿದ್ದು, ಒಂದು ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ಬಳಿಕ ಇದೇ ಡಿಸೆಂಬರ್​ ತಿಂಗಳಿನಿಂದ ತರಬೇತಿ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಅಗ್ನಿಪಥ ಯೋಜನೆಗೆ ವಿರೋಧಿಸಿ ದೇಶಾದ್ಯಂತ ಹಲವೆಡೆ ಭಾರೀ ಪ್ರತಿಭಟನೆಗಳು ನಡೆಸಲಾಗಿತ್ತು. ಆದರೆ ಯಾವುದೇ ಕಾರಣಕ್ಕೂ ಇದನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ರವಾನೆ ಮಾಡಿತ್ತು.
ಇದೀಗ ವಿರೋದಕ್ಕೆ ಕ್ಯಾರೇ ಅನ್ನದೇ ನಿರೀಕ್ಷೆಗೂ ಮೀರಿ ಯುವಕರಿಂದ ಅರ್ಜಿ ಸಲ್ಲಿಕೆಯಾಗಿರುವುದು ಯೋಜನೆಗೆ ಬೆಂಬಲ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!