October 12, 2026
Monday, October 12, 2026
spot_img

ಮುಂದಿನ 24 ಗಂಟೆಯಲ್ಲಿ ಬಿಹಾರ, ಯುಪಿ & ಉತ್ತರಾಖಂಡದಲ್ಲಿ ಪ್ರವಾಹ! ಹೈ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೇಪಾಳದಲ್ಲಿ ಜಲಪ್ರಳಯ ಸಂಭವಿಸಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಈ ಬೆನ್ನಲ್ಲೇ ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದಲ್ಲಿಯೂ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಪ್ರವಾಹ ಅಬ್ಬರಿಸುವ ಸಾಧ್ಯತೆ ಇದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಅಧಿಕಾರಿಗಳು ಗಡಿ ಪ್ರದೇಶಗಳ ಮೇಲೆ ನಿಗಾ ಇಟ್ಟಿದ್ದಾರೆ.

ನೇಪಾಳದಲ್ಲಿ ಹಿಂದೆಂದೂ ಆಗದಂತಹ ಜಲಪ್ರಳಯ ಸಂಭವಿಸಿದ್ದು, ಈವರೆಗೂ 177ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 49 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿರಾರು ಮಂದಿ ಕಾಣೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ. ಇಲ್ಲಿನ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಮೂರು ಸಾವಿರಕ್ಕು ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಎಲ್ಲೆಲ್ಲಿಗೆ ಹೈ ಅಲರ್ಟ್‌ ಘೋಷಣೆ?

ಬಿಹಾರದ ಪಶ್ಚಿಮ ಚಂಪಾರಣ್‌, ಪೂರ್ವ ಚಂಪಾರಣ್‌, ಗೋಪಾಲಗಂಜ್‌, ಮುಜಾಫರ್‌ಪುರ, ಸೀವನ್‌, ಸರಣ್‌, ಶಿಯೋಹರ್‌, ಸೀತಾರ್ಮಹಿ, ವೈಶಾಲಿ

ಉತ್ತರ ಪ್ರದೇಶದ ಹಾರಾಜ್‌ಗಂಜ್, ಕುಶಿನಗರ, ಪಿಲಿಭಿತ್, ಶ್ರಾವಸ್ತಿ, ಬಲರಾಮಪುರ, ಸಿದ್ಧಾರ್ಥನಗರ, ಗೋರಖ್ಪುರ ಹಾಗೂ ಉತ್ತರಾಖಂಡದ ಚಂಪಾವತ್‌ನಲ್ಲಿ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಪ್ರಧಾನಿ ಮೋದಿ ಮೇಲ್ವಿಚಾರಣೆ

ಪ್ರಧಾನಿ ಮೋದಿ ಈಗಾಗಲೇ ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ್ದು, ಯಾವುದೇ ರೀತಿಯ ಸಹಾಯಕ್ಕೂ ನಾವು ಸಿದ್ಧ ಎಂದು ಧೈರ್ಯ ನೀಡಿದ್ದಾರೆ. ಈಗಾಗಲೇ ದೆಹಲಿಯಿಂದ ನೆರೆಯ ರಾಷ್ಟ್ರಕ್ಕೆ ಪರಿಹಾರ ಸಾಮಾಗ್ರಿಗಳು ಬಂದಿಳಿದಿವೆ.

Must Read