ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲೆ ಮೋಡ ಸ್ಫೋಟಗೊಂಡಿದ್ದು, ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಪ್ರವಾಹ ಸಂಭವಿಸಿದೆ.
ಇದರ ಪರಿಣಾಮ 23 ಸೇನಾ ಸಿಬ್ಬಂದಿ ಕಾಣೆಯಾಗಿದ್ದರು. ಸಧ್ಯ ನಾಪತ್ತೆಯಾದವರ ಪೈಕಿ ಒರ್ವ ಸೈನಿಕರನನ್ನ ರಕ್ಷಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಲ್ಹೋನಕ್ ಕೆರೆಯ ಬಳಿಯು ಮೇಘಸ್ಫೋಟ ಸಂಭವಿಸಿ ಎಲ್ಲೆಂದರಲ್ಲ ನೀರು ನುಗ್ಗಿದೆ. ನಾಪತ್ತೆಯಾಗಿರುವ ಯೋಧರು ಯಾರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಪ್ರವಾಹದ ತೀವ್ರತೆಗೆ ಉತ್ತರ ಸಿಕ್ಕಿಂನ ಹಲವು ಭಾಗಗಳಲ್ಲಿ ಮನೆಗಳು ಮುಳುಗಿವೆ. ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಕಾರು, ಬೈಕ್‌ಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ.