ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ದಟ್ಟ ಮಂಜು ನೆಲೆಸಿದ್ದು, ದೆಹಲಿಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರು ಕೂಡ 20 ವಿಮಾನಗಳ ಹಾರಾಟದಲ್ಲಿ ವಿಳಂಬಗಳಾಗಿವೆ.
ನಿನ್ನೆ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯದಿಂದಾಗಿ 20 ವಿಮಾನಗಳು ವಿಳಂಬವಾಗಿವೆ. ಭಾನುವಾರವೂ 44 ವಿಮಾನಗಳು ವಿಳಂಬವಾಗಿದ್ದವು. ನಿಗದಿತ ಸಮಯಕ್ಕಿಂತ ವಿಮಾನ ತಡವಾಗಿದ್ದರಿಂದ ಪ್ರಯಾಣಿಕರು ಪರದಾಡಿದರು.
ವಿಮಾನ ನಿಲ್ದಾಣದ ಸುತ್ತ ದಟ್ಟ ಮಂಜು ಕವಿದಿದ್ದು, ರನ್ ವೇ ಕಾಣುತ್ತಿಲ್ಲ. ದೆಹಲಿಯಲ್ಲಿ ದಟ್ಟವಾದ ಮಂಜಿನಿಂದಾಗಿ ವಿಮಾನವು ಹಲವಾರು ಗಂಟೆಗಳ ಕಾಲ ವಿಳಂಬವಾಯಿತು. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಉತ್ತರ ಭಾರತದಲ್ಲಿ ಒಟ್ಟು 30 ರೈಲುಗಳು ವಿಳಂಬವಾಗಿವೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಗೋಚರತೆ 500 ಮೀಟರ್‌ಗೆ ಕುಸಿದಿದೆ. ದೆಹಲಿಯಿಂದ 30 ವಿಮಾನಗಳ ನಿರ್ಗಮನದಲ್ಲಿ ವಿಳಂಬವಾಗಿದೆ. 17 ವಿಮಾನಗಳನ್ನು ರದ್ದುಗೊಳಿಸಲಾಗಿದೆ.