ಹೊಸದಿಗಂತ ವರದಿ, ಆದಿಚುಂಚನಗಿರಿ:
ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಇಂದು ಜಾನಪದ ಕಲರವ ಮೇಳೈಸಿತು.
ಧಾರ್ಮಿಕ ಕೈಂಕರ್ಯಗಳಿಗೆ ಹೆಸರುವಾಸಿಯಾಗಿರುವ ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ಮಂಗಳವಾರ ಮತ್ತು ಬುಧವಾರ ರಾಜ್ಯ ಯುವಜನೋತ್ಸವ ನಡೆಯುತ್ತಿದೆ.
ಯುವ ಜನೋತ್ಸವದ ಉದ್ಘಾಟನೆ ದಿನವಾದ ಮಂಗಳವಾರ ಬೆಳಿಗ್ಗೆಯಿಂದಲೇ ವಿವಿಧ ಜಾನಪದ ಕಲಾಪ್ರಕಾರಗಳು ಶ್ರೀಕ್ಷೇತ್ರಕ್ಕೆ ಮತ್ತಷ್ಟು ಮೆರಗು ನೀಡಿದವು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿರುವ ವಿವಿಧ ಕಲಾ ತಂಡಗಳು, ತಮ್ಮ ಕಲಾ ಪ್ರಕಾರಗಳನ್ನ ಪ್ರದರ್ಶನ ಮಾಡಿದರು.