July 3, 2026
Friday, July 3, 2026
spot_img

ಮಕ್ಕಳು ಪೋಷಕರ ಮಾತನ್ನು ಕೇಳ್ಬೇಕು ಅಂದ್ರೆ ಈ 4 ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ

ಮಕ್ಕಳು ಮಿತಿಮೀರಿಹೋಗಿದ್ದಾರೆ. ಹೇಳಿದ ಮಾತು ಒಂದೂ ಕೇಳೋದಿಲ್ಲ. ಮನೆಯೆಲ್ಲಾ ಗಬ್ಬೆಬ್ಸಿದ್ದಾರೆ, ಏನು ಮಾಡ್ಬೇಡ ಅಂತೀವೋ ಅದನ್ನೇ ಮಾಡ್ತಾರೆ.. ಇದು ಟಾಡ್ಲರ್‌ ಮಕ್ಕಳಿರುವ ಎಲ್ಲ ಪೋಷಕರ ನಿತ್ಯದ ಗೋಳು.. ಆದರೆ ಹೇಳುವ ರೀತಿಯಲ್ಲಿ, ಹೇಳುವಂಥದ್ದನ್ನು ನೀವು ಹೇಳ್ತಿದ್ದೀರಾ? ಮಕ್ಕಳಿಗೆ ಸ್ವಂತ ಬುದ್ಧಿ ಇರೋದಿಲ್ಲ. ಅವರನ್ನು ತಿದ್ದಿ ನಡೆಸೋದು ಪೋಷಕರ ಜವಾಬ್ದಾರಿ. ಆದರೆ ನೀವು ನೋಡಿಕೊಳ್ಳುವ ಮಾತನಾಡುವ ರೀತಿಯ ಮೇಲೆ ಮುಂದೆ ಅವರೆಂಥ ಮನುಷ್ಯನಾಗುತ್ತಾರೆ ಅನ್ನೋದು ನಿರ್ಧರಿತವಾಗುತ್ತದೆ. ಮಕ್ಕಳು ನಿಮ್ಮ ಮಾತನ್ನು ಕೇಳ್ಬೇಕು ಅಂದ್ರೆ ಹೀಗೆ ಮಾಡಿ..

ಅವರ ಲೆವೆಲ್‌ಗೆ ನೀವು ಬನ್ನಿ

ನೀವು ಅಡುಗೆಮನೆಯಿಂದ ಬುಕ್‌ ಸರಿಯಾಗಿ ಜೋಡ್ಸು ಕಿತ್ತಾಕ್ಬೇಡ ಅಂತ ಕೂಗಿದ್ರೆ ಮಕ್ಕಳು ಕ್ಯಾರೇ ಅನ್ನೋದಿಲ್ಲ ಅಥವಾ ಉಲ್ಟಾ ಜವಾಬ್‌ ನೀಡ್ತಾರೆ. ಇದರ ಬದಲು ನೀವಿರುವ ಜಾಗಕ್ಕೆ ಅವರನ್ನು ಕರೆಸಿ ಅಥವಾ ಅವರಿರುವ ಜಾಗಕ್ಕೆ ನೀವೇ ಹೋಗಿ. ಅವರ ಲೆವೆಲ್‌ಗೆ ಕೂತು ಕಣ್ಣಲ್ಲಿ ಕಣ್ಣಿಡಿ. ಇದು ಅವರು ಮಾಡುತ್ತಿದ್ದ ಕೆಲಸದ ಮೇಲೆ ಫೋಕಸ್‌ ಹೋಗಿಸಿ ನಿಮ್ಮ ಮೇಲೆ ಎಲ್ಲ ಫೋಕಸ್‌ ಬರುವಂತೆ ಮಾಡುತ್ತದೆ. ಈಗ ಬುಕ್ಸ್‌ ಎತ್ತಿಡು ಹಾಳು ಮಾಡಬಾರದು ಎಂದು ಸ್ಟ್ರಾಂಗ್‌ ಆಗಿ ಹೇಳಿ.

ಕಿರುಚಾಡುವ ಮುನ್ನ ಮಕ್ಕಳನ್ನು ಮುಟ್ಟಿ ನೋಡಿ

ಮಕ್ಕಳಿಗೆ ಇದನ್ನು ಮಾಡ್ಬೇಡ. ಹೀಗೆ ಆಡ್ಬೇಡ ಎಂದು ಪ್ರತಿ ವಾಕ್ಯದಲ್ಲೂ ನಕರಾತ್ಮಕತೆ ತುಂಬಿ ಮಕ್ಕಳು ಪಾಸಿಟಿವ್‌ ಆಗಿರಲಿ ಅಂತ ಹೇಗೆ ಅಂದುಕೊಳ್ತೀರಿ? ಹತ್ತು ಬಾರಿ ಅವರ ಹೆಸರನ್ನು ಕೂಗುವ ಮುನ್ನ ಒಂದು ಬಾರಿ ಅವರ ಕೆನ್ನೆಯನ್ನೋ ಅಥವಾ ಹೆಗಲನ್ನೋ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅವರ ಹೆಸರು ಹೇಳಿ ನಿಮಗೇನು ಕೆಲಸ ಆಗ್ಬೇಕೋ ಅದನ್ನು ಹೇಳಿ.

ನಿಮ್ಮ ಮಾತುಗಳು ಸಿಂಪಲ್‌ ಆಗಿರಲಿ

ಮಕ್ಕಳಿಗೆ ದೊಡ್ಡವರಷ್ಟು ಅರ್ಥವಾಗೋದಿಲ್ಲ ಅನ್ನೋ ಸಿಂಪಲ್‌ ವಿಷಯ ನಿಮ್ಮ ತಲೆಯ ಒಳಗೆ ಹೊಕ್ಕಿರಲಿ. ನೀವು ಹೇಳುವ ಎಲ್ಲಾ ಮಾತುಗಳನ್ನು ಉಲ್ಟಾ ತೆಗೆದುಕೊಳ್ಳುವ, ಪೂರ ಮಾತು ಮುಗಿಯುವ ಮುನ್ನವೇ ಏನೇನೋ ಅರ್ಥ ಮಾಡಿಕೊಂಡು ಸಿಟ್ಟಾಗುವ ಕಲೆ ಅವರಿಗಿದೆ. ನಿಮ್ಮ ಮಾತುಗಳು ಸಿಂಪಲ್‌ ಆಗಿರಲಿ. ಒಂದು ಬಾರಿ ಒಂದೇ ಕಮಾಂಡ್‌ ಬೆಸ್ಟ್‌. ʼಆಟಸಾಮಾನುಗಳನ್ನು ಅದರ ಡಬ್ಬಿಗೆ ಈಗ್ಲೇ ಹಾಕು, ಒಂದೊಂದು ವಸ್ತು ಒಂದೊಂದು ಕಡೆ ಇದೆ. ಬುಕ್ಸ್‌ ಬೇರೆ ಕಡೆ, ಆಟಸಾಮಾನು ಬೇರೆ ಕಡೆ, ಕಲರ್ಸ್‌ ಬೇರೆ ಕಡೆ ಇಡು. ದಿನಾ ಇದೇ ಕೆಲಸ ಮಾಡಿ ಸಾಕಾಗಿದೆʼ ಇಷ್ಟೆಲ್ಲಾ ಹೇಳುವ ಬದಲು ʼಆಟಸಾಮಾನುಗಳನ್ನು ಬಾಕ್ಸ್‌ಗೆ ಈಗಲೇ ಹಾಕುʼ ಇಷ್ಟೇ ಹೇಳಿ. ಇದು ಮುಗಿದ ನಂತರ ಬೇರೆ ಕಮಾಂಡ್‌ ಕೊಡಿ.

ಏನು ಆಗಬೇಕು ಕ್ಲಿಯರ್‌ ಆಗಿ ಹೇಳಿ

ಏನು ಮಾಡಬೇಡ ಎನ್ನುವ ಬದಲು ಏನು ಮಾಡು ಎನ್ನುವುದನ್ನು ಹೇಳಿ. ಉದಾಹರಣೆಗೆ ಓಡಬೇಡ ಎಂದು ಹೇಳಬೇಕಾದರೆ ನಡೆದುಕೊಂಡು ಓಡಾಡು ಪ್ಲೀಸ್‌ ಎನ್ನಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !