PARENTING | ಸ್ಮಾರ್ಟ್ ಫೋನ್‌‌‌‌ಗಳಿಂದ ನಿಮ್ಮ ಮಕ್ಕಳನ್ನು ದೂರವಿರಿಸಲು ಈ ಟಿಪ್ಸ್ ಫಾಲೋ ಮಾಡಿ!

ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌‌‌‌ಫೋನ್‌‌‌‌ಗಳು ಮಕ್ಕಳ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಸಮಯ ಕಳೆಯಲು ಆರಂಭವಾಗುವ ಈ ಚಟುವಟಿಕೆ ಕ್ರಮೇಣ ಅವರಿಗೆ ಚಟವಾಗಿ ಪರಿಣಮಿಸುತ್ತದೆ. ಇವತ್ತು ಪೋಷಕರು ತಮ್ಮ ಮಕ್ಕಳನ್ನು ಸ್ಮಾರ್ಟ್ ಫೋನ್‌‌‌‌ಗಳಿಂದ ದೂರವಿರಿಸಲು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕೆಲವು ಸಲಹೆಗಳಿವೆ.

ಮಿತಿಗಳನ್ನು ನಿಗದಿಪಡಿಸಿ
ಫೋನ್ ಬಳಕೆಗೆ ನಿರ್ದಿಷ್ಟ ಸಮಯವನ್ನು ಹೊಂದಿಸಿ. ಜೊತೆಗೆ ಊಟದ ಸಮಯದಲ್ಲಿ, ಕುಟುಂಬದೊಂದಿಗಿನ ಸಮಯದಲ್ಲಿ ಅಥವಾ ಮಲಗುವ ಮೊದಲು ಫೋನ್ ಬಳಸಲು ನೀಡಬೇಡಿ.

ಸ್ಕ್ರೀನ್ ಮುಕ್ತ ಸಮಯ
ಮೊಬೈಲ್ ನೋಡುವ ಬದಲು ಮಕ್ಕಳಿಗೆ ಚಿತ್ರಕಲೆ ಅಥವಾ ಕರಕುಶಲ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ. ನಾಟಕ, ಬೊಂಬೆ ಪ್ರದರ್ಶನಗಳು, ಅಥವಾ ಪಾತ್ರಗಳಂತೆ ವೇಷಭೂಷಣ ಧರಿಸುವುದು. ಸರಳ ವಿಜ್ಞಾನ ಪ್ರಯೋಗಗಳು ಅಥವಾ ಲೆಗೊ ಬಿಲ್ಡಿಂಗ್ ಮುಂತಾದ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸಿ.

ಹೊರಾಂಗಣ ಚಟುವಟಿಕೆಗೆ ಪೋತಹಿಸಿ
ಸೈಕ್ಲಿಂಗ್, ಓಟ, ಅಡಗಿಕೊಳ್ಳುವುದು, ಪ್ರಕೃತಿ ನಡಿಗೆ, ಗಿಡಗಳನ್ನು ನೆಡುವುದು, ಅಥವಾ ಈಜು, ಕರಾಟೆ ನೆಚ್ಚಿನ ಸಂಗೀತ ಉಪಕರಣಗಳ ಕಲಿಕೆ ಅಥವಾ ನೃತ್ಯವನ್ನು ಕಲಿಸಲು ಪ್ರೋತ್ಸಾಹ.

ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ
ಜೊತೆಯಾಗಿ ಅಡುಗೆ ಮಾಡುವುದು, ಶಾಪಿಂಗ್ ಸಹಾಯ ಮಾಡಲು ಹೇಳುವುದು, ಕರಕುಶಲ ವಸ್ತುಗಳ ತಯಾರಿಯನ್ನು ಕಲಿಸುವುದು ಇತ್ಯಾದಿ.

ಫೋನ್‌‌‌‌ಗಳನ್ನು ಕಡಿಮೆ ಆಕರ್ಷಕವಾಗಿ ಮಾಡಿ
ನೋಟಿಫಿಕೇಶನ್‌‌‌‌ಗಳನ್ನು ಆಫ್ ಮಾಡಿ, ಹೆಚ್ಚು ಹೊರಾಂಗಣ ಆಟ, ಹೆಚ್ಚುವರಿ ಕಥೆಯ ಸಮಯ ಅಥವಾ ಮೋಜಿನ ವಿಹಾರದ ವೇಳೆ ಉಡುಗೊರೆಯನ್ನು ನೀಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!