September 19, 2026
Saturday, September 19, 2026
spot_img

Food | ಅನ್ನಕ್ಕೆ ಸೂಪರ್ ಕಾಂಬಿನೇಷನ್: 10 ನಿಮಿಷದಲ್ಲಿ ರೆಡಿಯಾಗುತ್ತೆ ಟೇಸ್ಟಿ ಹುರುಳಿ ರಸಂ!

ಹುರುಳಿಕಾಳು

ಟೊಮೆಟೊ

ಹುಣಸೆಹಣ್ಣು

ರಸಂ ಪೌಡರ್

ಬೆಳ್ಳುಳ್ಳಿ

ಜೀರಿಗೆ ಮತ್ತು ಮೆಣಸು

ಸಾಸಿವೆ, ಇಂಗು, ಕರಿಬೇವು, ಒಣಮೆಣಸಿನಕಾಯಿ

ಅರಿಶಿನ, ಉಪ್ಪು ಮತ್ತು ಎಣ್ಣೆ

ಕೊತ್ತಂಬರಿ ಸೊಪ್ಪು

ಹುರುಳಿಕಾಳನ್ನು ಚೆನ್ನಾಗಿ ತೊಳೆದು, ಕುಕ್ಕರ್‌ನಲ್ಲಿ ಸಾಕಷ್ಟು ನೀರು ಹಾಕಿ 4-5 ವಿಸಿಲ್ ಕೂಗಿಸಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಯಿಸಿದ ಕಾಳಿನಿಂದ ನೀರನ್ನು ಸಪರೇಟ್ ಮಾಡಿ. ಅದರಲ್ಲಿ ಸ್ವಲ್ಪ ಬೇಯಿಸಿದ ಕಾಳು ಮತ್ತು ಟೊಮೆಟೊ ಹಾಕಿ ತಣ್ಣಗಾದ ಮೇಲೆ ಪೇಸ್ಟ್ ತರ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಗೆ ಕಾಳು ಬಸಿದ ನೀರು, ರುಬ್ಬಿದ ಪೇಸ್ಟ್, ಹುಣಸೆಹುಳಿ ನೀರು, ಜೀರಿಗೆ-ಮೆಣಸಿನ ಪುಡಿ, ರಸಂ ಪೌಡರ್, ಅರಿಶಿನ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸಣ್ಣ ಉರಿಯಲ್ಲಿ 8-10 ನಿಮಿಷ ಕುದಿಸಿ. ಇನ್ನೊಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಕರಿಬೇವು ಮತ್ತು ಚಿಟಿಕೆ ಇಂಗು ಹಾಕಿ ಒಗ್ಗರಣೆ ಮಾಡಿ, ಕುದಿಯುತ್ತಿರುವ ರಸಂಗೆ ಹಾಕಿ ಮುಚ್ಚಳ ಮುಚ್ಚಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿಯಾದ ಹುರುಳಿ ರಸಂ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !