September 9, 2026
Wednesday, September 9, 2026
spot_img

Food | ಖಾರ-ಹುಳಿಯ ಸೂಪರ್ ಕಾಂಬಿನೇಷನ್.. ಸ್ಪೈಸಿ ಗಾರ್ಲಿಕ್ ಲೈಮ್ ಚಿಕನ್ ರೆಸಿಪಿ

ಚಿಕನ್

ಬೆಳ್ಳುಳ್ಳಿ

ನಿಂಬೆಹಣ್ಣಿನ ರಸ

ಖಾರದ ಪುಡಿ

ಪೆಪ್ಪರ್

ಸೋಯಾ ಸಾಸ್

ಹಸಿಮೆಣಸಿನಕಾಯಿ

ಎಣ್ಣೆ

ಉಪ್ಪು

ಕೊತ್ತಂಬರಿ ಸೊಪ್ಪು

ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ನೀರಿಲ್ಲದಂತೆ ಬಸೀರಿ. ಒಂದು ಪಾತ್ರೆಗೆ ಚಿಕನ್ ಹಾಕಿ, ಅದಕ್ಕೆ ನಿಂಬೆರಸ, ಖಾರದಪುಡಿ, ಪೆಪ್ಪರ್ ಪುಡಿ, ಸೋಯಾ ಸಾಸ್ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈ ಮಸಾಲಾ ಚಿಕನ್‌ಗೆ ಚೆನ್ನಾಗಿ ಹಿಡಿಯಲು ಕನಿಷ್ಠ 15 ರಿಂದ 20 ನಿಮಿಷ ಪಕ್ಕಕ್ಕೆ ಇಡಿ.

ಪ್ಯಾನ್ ಒಲೆ ಮೇಲಿಟ್ಟು 2 ಚಮಚ ಎಣ್ಣೆ ಮತ್ತು 1 ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಬೆಣ್ಣೆ ಕರಗಿದ ತಕ್ಷಣ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಿ ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈಗ ಮ್ಯಾರಿನೇಟ್ ಮಾಡಿಟ್ಟ ಚಿಕನ್ ತುಂಡುಗಳನ್ನು ಪ್ಯಾನ್‌ಗೆ ಹಾಕಿ. ಉರಿಯನ್ನು ಮೀಡಿಯಂನಲ್ಲಿಟ್ಟು 5 ರಿಂದ 8 ನಿಮಿಷ ಚೆನ್ನಾಗಿ ತಿರುವಿ. ಚಿಕನ್ ನೀರನ್ನು ಬಿಟ್ಟುಕೊಳ್ಳುತ್ತದೆ.

ಪ್ಯಾನ್ ಮುಚ್ಚಳ ಮುಚ್ಚಿ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಮಸಾಲೆಯಲ್ಲಾ ಗಟ್ಟಿಯಾಗಿ, ಡ್ರೈ ಆಗಿ ಬರುತ್ತದೆ. ಕೊನೆಯಲ್ಲಿ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ, ಒಲೆಯಿಂದ ಇಳಿಸುವ ಮುನ್ನ ಮತ್ತೊಂದು ಚಮಚ ನಿಂಬೆರಸ ಹಿಂಡಿ ಮಿಕ್ಸ್ ಮಾಡಿ.

ಈಗ ಬಿಸಿಬಿಸಿಯಾದ, ಬಾಯಲ್ಲಿ ನೀರೂರಿಸುವ ‘ಸ್ಪೈಸಿ ಗಾರ್ಲಿಕ್ ಲೈಮ್ ಚಿಕನ್’ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !