ಆರೋಗ್ಯಕರ ಜೀವನಶೈಲಿಗೆ ಸರಿಯಾದ ಆಹಾರ ಅತೀ ಮುಖ್ಯ. ವಿಭಿನ್ನ ಬಣ್ಣದ ತರಕಾರಿಗಳು ಮತ್ತು ಹಣ್ಣುಗಳಿಂದ ತಯಾರಿಸಿದ ಗ್ರೀಕ್ ಸಲಾಡ್ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಸಸ್ಯಹಾರಿಗಳಿಗೆ ಉತ್ತಮ ಆಯ್ಕೆಯಾಗಿದ್ದು, ತಾಜಾ ಮತ್ತು ಪೌಷ್ಟಿಕ ಅಂಶಗಳಿಂದ ಕೂಡಿದಂತಹ ಪರಿಪೂರ್ಣ ಆಹಾರವಾಗಿದೆ.
ಬೇಕಾಗುವ ಸಾಮಗ್ರಿಗಳು:
1 ಕ್ಯೂಕಂಬರ್
2 ಟೊಮೇಟೋ
1 ಕ್ಯಾರಟ್
1-1 ಹಸಿಮೆಣಸು
100 ಗ್ರಾಂ ಸ್ಪ್ರೌಟ್ಸ್
ಗ್ರೀನ್ ಆಲಿವ್, ಬ್ಲ್ಯಾಕ್ ಆಲಿವ್ (ಪ್ರತಿ 25 ಗ್ರಾಂ)
4-5 ಚಮಚ ಆಲಿವ್ ಆಯಿಲ್
2 ಸಲಾಡ್ ಲೀಫ್ಸ್
ಜೀರಿಗೆ ಪುಡಿ
ಉಪ್ಪು, ರುಚಿಗೆ ತಕ್ಕಷ್ಟು
ಲೆಮನ್ ಜ್ಯೂಸ್
ಒರೆಗನೊ, ಮಸ್ಟರ್ಡ್ ಸಾಸ್, ರೆಡ್ ವೈನ್ ವಿನಿಗರ್, ಪುದಿನಾ
ಮಾಡುವ ವಿಧಾನ:
ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ತುಂಡರಿಸಿಕೊಳ್ಳಿ. ಇದಕ್ಕೆ ಆಲಿವ್ ಆಯಿಲ್, ಲೆಮನ್ ಜ್ಯೂಸ್, ಉಪ್ಪು, ಒರೆಗನೊ, ಮಸ್ಟರ್ಡ್ ಸಾಸ್, ರೆಡ್ ವೈನ್ ವಿನಿಗರ್, ಮತ್ತು ಸಲಾಡ್ ಲೀಫ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದನ್ನು 15 ನಿಮಿಷ ಫ್ರಿಡ್ಜ್‌ನಲ್ಲಿ ಇಟ್ಟು ತಣಿಸಿದ ನಂತರ, ಜೀರಿಗೆ ಪುಡಿ ಮತ್ತು ಪುದಿನಾ ಸೊಪ್ಪು ಮಿಶ್ರಣ ಮಾಡಿದರೆ ಆರೋಗ್ಯಕರ ಗ್ರೀಕ್ ಸಲಾಡ್ ರೆಡಿ.