ಬೆಳಗ್ಗಿನ ತಿಂಡಿಗೆ ಅಥವಾ ಮಕ್ಕಳ ಲಂಚ್ ಬಾಕ್ಸ್‌ಗೆ ಸೂಕ್ತವಾದ ಒಂದು ಪೌಷ್ಟಿಕ ಆಹಾರವೇ ಪಾಲಕ್ ರೈಸ್. ಕಬ್ಬಿಣಾಂಶ ಸಮೃದ್ಧವಾದ ಪಾಲಕ್ ಮಕ್ಕಳಿಂದ ಹಿಡಿದು ಎಲ್ಲರು ಇಷ್ಟಪಡುವ ಈ ಗ್ರೀನ್ ರೈಸ್ ಅನ್ನು ಸುಲಭವಾಗಿ ತಯಾರಿಸಬಹುದು. ಹಾಗಿದ್ರೆ, ಪಾಲಕ್ ರೈಸ್ ಮಾಡುವ ಸರಳ ವಿಧಾನ ತಿಳಿದುಕೊಳ್ಳಿ!
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಬೌಲ್
ಬೇಯಿಸಿದ ಪಾಲಕ್ ಸೊಪ್ಪು – ಅರ್ಧ ಕಪ್
ಕರಿಬೇವು – ಸ್ವಲ್ಪ
ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ – ಅಗತ್ಯಕ್ಕೆ ತಕ್ಕಷ್ಟು
ಜೀರಿಗೆ – ಅರ್ಧ ಚಮಚ
ಅರಶಿಣ – ಅರ್ಧ ಚಮಚ
ಹಸಿರು ಮೆಣಸಿನಕಾಯಿ – 3
ಹೆಚ್ಚಿದ ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಬೇಯಿಸಿದ ಪಾಲಕ್ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
ಈಗ ಒಂದು ಬಾಣಾಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಮೇಲೆ ಜೀರಿಗೆ, ಪಲಾವ್ ಎಲೆ, ಚೆಕ್ಕೆ, ಲವಂಗ ಹಾಗೂ ಏಲಕ್ಕಿಯನ್ನು ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ಕರಿಬೇವು ಮತ್ತು ಉದ್ದ ಹೆಚ್ಚಿದ ಹಸಿರು ಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಹಸಿವಾಸನೆ ಹೋಗುವವರೆಗೆ ತಿರುವಿಕೊಳ್ಳಿ.
ಈಗ ಇದಕ್ಕೆ ರುಬ್ಬಿದ ಪಾಲಕ್ ಪೇಸ್ಟ್ ಅನ್ನು ಹಾಕಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅರ್ಧ ಚಮಚ ಅರಶಿಣ ಹಾಕಿ ಚನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ 2 ಚಮಚ ನೀರನ್ನು ಹಾಕಿಕೊಂಡು ಎಣ್ಣೆ ಬಿಡುವವರೆಗೆ ಕುದಿಸಿಕೊಳ್ಳಿ. ಬಳಿಕ ಇದಕ್ಕೆ ಅನ್ನ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಂಡರೆ ಪಾಲಕ್ ರೈಸ್ ರೆಡಿ.