ಬೇಕಾಗುವ ಸಾಮಗ್ರಿಗಳು:
* ಬಾದಾಮಿ – 1 ಕಪ್
* ಹಾಲು – 1 ಕಪ್
* ಸಕ್ಕರೆ – 1 ಕಪ್
* ತುಪ್ಪ – 5 ಟೇಬಲ್ ಸ್ಪೂನ್
* ಏಲಕ್ಕಿ ಪುಡಿ – 1/2 ಟೀ ಸ್ಪೂನ್
* ಕೇಸರಿ – 2 ಪಿಂಚ್
* ಪಿಸ್ತಾ (ಹಚ್ಚಿದ್ದು) – 2 ಟೀ ಸ್ಪೂನ್
ಮಾಡುವ ವಿಧಾನ:
ಬಾದಾಮಿಯನ್ನು ಬಿಸಿ ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆಯಿರಿ. ನಂತರ, ಬಾದಾಮಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ತುಂಬಾ ನುಣ್ಣಗೆ ಅಲ್ಲ, ಸ್ವಲ್ಪ ತರಿತರಿಯಾಗಿರುವಂತೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಲನ್ನು ಸುರಿದು ಕಾಯಿಸಿ. ಹಾಲು ಕುದಿಯುತ್ತಿರುವಾಗ, ಅದಕ್ಕೆ ಸಕ್ಕರೆ ಹಾಕಿ ಕರಗುವವರೆಗೂ ಕೈಯಿಂದ ಕಲಕಿ. ಹಾಲು ಕುದಿದ ನಂತರ, ಅದಕ್ಕೆ ರುಬ್ಬಿಟ್ಟ ಬಾದಾಮಿಯನ್ನು ಹಾಕಿ ನಿಧಾನವಾಗಿ ಕೈಯಾಡಿಸಿ. ಬಾದಾಮಿ ಮಿಶ್ರಣ ಕುದಿಯಲು ಆರಂಭಿಸಿದಾಗ, ತುಪ್ಪವನ್ನು ಸೇರಿಸಿ. ತುಪ್ಪ ಸೇರಿಸಿದ ನಂತರ, ಏಲಕ್ಕಿ ಪುಡಿ ಮತ್ತು ನೆನೆಸಿಟ್ಟ ಕೇಸರಿಯನ್ನು ಸೇರಿಸಿ. ಹಲ್ವಾ ದಪ್ಪವಾಗುವವರೆಗೂ ಕೈಯಾಡಿಸಿ. ಹಲ್ವಾ ಸಿದ್ಧವಾದ ನಂತರ, ಅದನ್ನು ಪ್ಲೇಟ್ ಗೆ ಹಾಕಿ, ಮೇಲೆ ಪಿಸ್ತಾ ಹಾಕಿ ಸರ್ವ್ ಮಾಡಿ.