FOOD | ಪರೋಟಾ, ಚಪಾತಿಗೆ ಬೆಸ್ಟ್ ಕಾಂಬಿನೇಷನ್ ನವಾಬಿ ಪನೀರ್, ರೆಸಿಪಿ ವೆರಿ ಸಿಂಪಲ್

ಪರೋಟಾ ಮತ್ತು ಚಪಾತಿಗೆ ಹೇಳಿ ಮಾಡಿಸಿದ ನವಾಬಿ ಪನೀರ್ ತುಂಬಾ ರುಚಿಕರವಾಗಿರುತ್ತದೆ. ಅದರ ರೆಸಿಪಿ ಕೂಡ ಅಷ್ಟೇ ಸುಲಭ. ಇಲ್ಲಿದೆ ನೋಡಿ ರೆಸಿಪಿ:

ಬೇಕಾಗುವ ಸಾಮಗ್ರಿಗಳು:

ಪನೀರ್ – 200 ಗ್ರಾಂ
ಈರುಳ್ಳಿ – 1 ದೊಡ್ಡದು
ಟೊಮೆಟೊ – 2 ಮಧ್ಯಮ ಗಾತ್ರದ್ದು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 2
ಗೋಡಂಬಿ – 10-12
ಗಸಗಸೆ- 1 ಚಮಚ
ಕೆನೆ (Fresh Cream) – 2 ಚಮಚ
ಕಸೂರಿ ಮೇಥಿ – 1/2 ಚಮಚ
ಗರಂ ಮಸಾಲ – 1/2 ಚಮಚ
ಅರಿಶಿನ ಪುಡಿ – 1/4 ಚಮಚ
ಕೆಂಪು ಮೆಣಸಿನ ಪುಡಿ – 1/2 ಚಮಚ
ಧನಿಯಾ ಪುಡಿ – 1 ಚಮಚ
ಜೀರಿಗೆ ಪುಡಿ – 1/2 ಚಮಚ
ಎಣ್ಣೆ ಅಥವಾ ತುಪ್ಪ – 2 ಚಮಚ
ಉಪ್ಪು – ರುಚಿಗೆ ತಕ್ಕಂತೆ
ಸಕ್ಕರೆ – 1/4 ಚಮಚ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಮೊದಲಿಗೆ ಗೋಡಂಬಿ ಮತ್ತು ಗಸಗಸೆಯನ್ನು ಸ್ವಲ್ಪ ಹೊತ್ತು ಬಿಸಿ ನೀರಿನಲ್ಲಿ ನೆನೆಸಿಡಿ. ನಂತರ ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ತಿಳಿ ಗುಲಾಬಿ ಬಣ್ಣ ಬರುವವರೆಗೆ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಒಂದು ನಿಮಿಷ ಹುರಿಯಿರಿ. ಟೊಮೆಟೊ ಪೇಸ್ಟ್ ಸೇರಿಸಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಿ. ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಮಸಾಲೆ ಕಂದು ಬಣ್ಣ ಬರುವವರೆಗೆ ಬೇಯಿಸಿ.

ರುಬ್ಬಿದ ಗೋಡಂಬಿ ಮತ್ತು ಗಸಗಸೆ ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿ 2-3 ನಿಮಿಷ ಬೇಯಿಸಿ. ಉಪ್ಪು ಮತ್ತು ಸಕ್ಕರೆ ಸೇರಿಸಿ. ಕತ್ತರಿಸಿದ ಪನೀರ್ ತುಂಡುಗಳನ್ನು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ. ಕಸೂರಿ ಮೇಥಿಯನ್ನು ಕೈಯಿಂದ ಉಜ್ಜಿ ಹಾಕಿ ಮತ್ತು ಗರಂ ಮಸಾಲ ಸೇರಿಸಿ. ಕೊನೆಯಲ್ಲಿ ಕೆನೆ ಸೇರಿಸಿ ಚೆನ್ನಾಗಿ ಕಲಸಿ 2 ನಿಮಿಷ ಬೇಯಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ನಿಮ್ಮ ರುಚಿಕರವಾದ ನವಾಬಿ ಪನೀರ್ ಪರೋಟಾ ಅಥವಾ ಚಪಾತಿ ಜೊತೆ ಸವಿಯಲು ಸಿದ್ಧ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!