ಸ್ಟಫ್ಡ್ ಮಶ್ರೂಮ್ ಟೇಸ್ಟಿ ಮತ್ತು ಕ್ರಿಸ್ಪಿಯಾದ ಸ್ಟಾರ್ಟರ್ ಅಥವಾ ಸ್ನ್ಯಾಕ್ ಆಗಿದ್ದು, ಪಾರ್ಟಿಗಳಲ್ಲಿ ಅಥವಾ ಸಂಜೆ ತಿಂಡಿಗೆ ಇದು ಪರ್ಫೆಕ್ಟ್. ಇದನ್ನು ಸುಲಭವಾಗಿ ಮಾಡೋದೋ ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಮಶ್ರೂಮ್ – 10-12 (ಮಧ್ಯಮ ಗಾತ್ರ)
ಈರುಳ್ಳಿ – 1
ಬೆಳ್ಳುಳ್ಳಿ – 2-3 ಎಸಳು
ಹಸಿಮೆಣಸು – 1
ಬಟಾಣಿ – 2 ಟೇಬಲ್ ಸ್ಪೂನ್
ಮೈದಾ – 2 ಟೇಬಲ್ ಸ್ಪೂನ್
ಬ್ರೆಡ್ ಕ್ರಂಬ್ಸ್ – 1/2 ಕಪ್
ಮೆಣಸಿನ ಪುಡಿ – 1/2 ಟೀ ಸ್ಪೂನ್
ಜೀರಿಗೆ ಪುಡಿ – 1/4 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಹಾಲು ಅಥವಾ ನೀರು – ಅಗತ್ಯಕ್ಕೆ ತಕ್ಕಷ್ಟು
ಚೀಸ್ – 2 ಟೇಬಲ್ ಸ್ಪೂನ್
ಎಣ್ಣೆ – ಕರಿಯಲು
ಮಾಡುವ ವಿಧಾನ:
ಅಣಬೆಗಳನ್ನು ಸ್ವಚ್ಛವಾಗಿ ತೊಳೆದು ಅದರ ದಂಟನ್ನು ಕತ್ತರಿಸಿ ಮೇಲ್ಭಾಗವನ್ನು ಬೇರ್ಪಡಿಸಿ ಇಟ್ಟುಕೊಳ್ಳಿ.
ಈಗ ಒಂದು ಪ್ಯಾನ್ ತೆಗೆದುಕೊಂಡು, ಸ್ವಲ್ಪ ಎಣ್ಣೆ ಹಾಕಿ, ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು, ಅಣಬೆಗಳ ದಂಟು, ಬಟಾಣಿ ಹಾಕಿ ಮಿಕ್ಸ್ ಮಾಡಿ 2-3 ನಿಮಿಷ ಹುರಿಯಿರಿ. ನಂತರ ಇದಕ್ಕೆ ಉಪ್ಪು, ಮೆಣಸಿನ ಪುಡಿ, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಹುರಿದ ಮಿಶ್ರಣ ತಣ್ಣಗಾದ ಮೇಲೆ ಅದಕ್ಕೆ ಚೀಸ್ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಪ್ರತಿ ಅಣಬೆಯ ಮೇಲ್ಭಾಗದೊಳಗೆ ತುಂಬಿಸಿ. ನಂತರ ಮೈದಾ ನೀರು ಮಿಕ್ಸ್ ಮಾಡಿ, ಸ್ಟಫ್ ಮಾಡಿದ ಅಣಬೆಗಳನ್ನು ಈ ಪೇಸ್ಟ್‌ನಲ್ಲಿ ಡಿಪ್ ಮಾಡಿ, ಬ್ರೆಡ್ ಕ್ರಂಬ್ಸ್‌ನಲ್ಲಿ ರೋಲ್ ಮಾಡಿ.
ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಅಣಬೆಗಳನ್ನು ಕ್ರಿಸ್ಪಿಯಾಗುವವರೆಗೆ ಡೀಪ್ ಫ್ರೈ ಮಾಡಿದರೆ ಕ್ರಿಸ್ಪಿ ಸ್ಟಫ್ಡ್ ಮಶ್ರೂಮ್ ರೆಡಿ.