ಆನೇಕಲ್‌ ಮತದಾರರಿಗೆ ಊಟೋಪಚಾರ, ಮಜ್ಜಿಗೆ, ಪಾನಕ, ಕೋಸಂಬರಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಸಿಲಿಗೆ ಹೈರಾಣಾಗಿ ಯಾಕಾದರೂ ಮತ ಹಾಕಲು ಬಂದೆವೋ ಎಂದು ಯೋಚಿಸುವ ಮತದಾರರ ಮನವೊಲಿಸಲು ಹಾಗೂ ಇನ್ನಷ್ಟು ಮತದಾರರನ್ನು ಸೆಳೆಯಲು  ಆನೇಕಲ್‌ನಲ್ಲಿ ವೋಟರ್ಸ್‌ಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ ಮಾಡಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಶಾಂತಿಪುರದಲ್ಲಿ ಮತದಾರರಿಗೆ ಪಾನಕ ನೀರು, ಮಜ್ಜಿಗೆ, ಹೆಸರುಬೇಳೆ ವಿತರಣೆ ಮಾಡಲಾಗುತ್ತಿದೆ. ಮತದಾರರು ಪಾನಕ ಕುಡಿದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!